ಮೆಲ್ಬೋರ್ನ್ ಟೆಸ್ಟ್ ಗೂ ಮೊದಲು ಬ್ಯಾಟ್ಸ್ ಮನ್ ಗಳಿಗೆ ಎಚ್ಚರಿಕೆ ನೀಡಿದ ವಿರಾಟ್ ಕೊಹ್ಲಿ
ಹೀಗಾಗಿ ಇದೀಗ ತಂಡದ ಬ್ಯಾಟ್ಸ್ ಮನ್ ಗಳಿಗೆ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ. ‘ನಾನು ಯಾರನ್ನೂ ವೈಯಕ್ತಿಕವಾಗಿ ಹೇಳುವುದಿಲ್ಲ. ಆದರೆ ಎಲ್ಲರೂ ಗಮನಿಸಿದಂತೆ ಬೌಲರ್ ಗಳು ಉತ್ತಮ ಆಟ ಆಡಿದ್ದಾರೆ. ಆದರೆ ಬ್ಯಾಟ್ಸ್ ಮನ್ ಗಳು ಸಾಕಷ್ಟು ರನ್ ಗಳಿಸದೇ ಬೌಲರ್ ಗಳಿಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬ್ಯಾಟ್ಸ್ ಮನ್ ಗಳು ಜವಾಬ್ಧಾರಿ ತೆಗೆದುಕೊಂಡು ಸ್ಕೋರ್ ಬೋರ್ಡ್ ನಲ್ಲಿ ರನ್ ಪೇರಿಸುವುದರತ್ತ ಗಮನಹರಿಸಬೇಕು’ ಎಂದು ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ.