ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಗೇ ನುಗ್ಗಿ ಶೂಟೌಟ್ ಮಾಡಿದ ವ್ಯಕ್ತಿ: 5 ಜನರ ಸಾವು

ಮಂಗಳವಾರ, 6 ಜೂನ್ 2017 (10:38 IST)
ಫ್ಲೋರಿಡಾ:ಅಮೆರಿಕದ ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ 5 ಮಂದಿಯನ್ನು ಹತ್ಯೆಗೈದಿದ್ದಾನೆ. ಅದೂ ತಾನು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿಯೇ ಗುಂಡಿನ ಮಳೆಗರೆದಿದ್ದಾನೆ.
 
ಬಂದೂಕು ಹಿಡಿದುಕೊಂಡು ಬಂದ ವ್ಯಕ್ತಿಯೊಬ್ಬ ತಾನು ಹಿಂದೆ ಕೆಲಸ ಮಾಡುತ್ತಿದ್ದ ಕಚೇರಿಗೆ ನುಗ್ಗಿ, ಒಂದೇ ಸಮನೆ ಗುಂಡಿನ ಮಳೆಗರೆದಿದ್ದಾನೆ.  ಘಟನೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಐವರು ಸ್ಥಳದಲ್ಲೇ ಅಸುನೀಗಿದ್ದಾರೆ. ನಂತರ, ದಾಳಿಕೋರನೂ ತನಗೆ ತಾನೇ ಶೂಟ್‌ ಮಾಡಿಕೊಂಡು ಸಾವನ್ನಪ್ಪಿದ್ದಾನೆ.
 
 ಏಪ್ರಿಲ್‌ನಲ್ಲಿ ಈತನನ್ನು ಕೆಲಸದಿಂದ ಕಿತ್ತುಹಾಕಿದ್ದ ಕೋಪಕ್ಕೆ ಆತ ಹೀಗೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ವೆಬ್ದುನಿಯಾವನ್ನು ಓದಿ