ಸ್ಮಾಕೋ : ರಷ್ಯಾದ ಎರಡನೇ ಶ್ರೀಮಂತ ವ್ಯಕ್ತಿ ವ್ಲಾದಿಮಿರ್ ಪೊಟಾನಿನ್ ಅವರು ತಮ್ಮ ವಿಚ್ಛೇದಿತ ಪತ್ನಿಗೆ ಬರೋಬ್ಬರಿ 52 ಸಾವಿರ ಕೋಟಿ ರು. ಜೀವನಾಂಶ ನೀಡಬೇಕಾಗಿರುವ ಸವಾಲು ಎದುರಿಸುತ್ತಿದ್ದಾರೆ.
ಈ ಮೂಲಕ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ನಂತರ ಇಷ್ಟು ದೊಡ್ಡ ಮೊತ್ತದ ಜೀವನಾಂಶ ನೀಡುವ ವಿಶ್ವದ ವ್ಯಕ್ತಿಗಳಲ್ಲಿ ಒಬ್ಬರು ಎನಿಸಿಕೊಳ್ಳಲಿದ್ದಾರೆ.
ಮಂಗಳವಾರ ಲಂಡನ್ ನ್ಯಾಯಾಲಯದಲ್ಲಿ ವಿಚ್ಛೇದನ ಕುರಿತ ಅರ್ಜಿ ವಿಚಾರಣೆ ವೇಳೆ ಪೊಟಾನಿನ್ ಮಾಜಿ ಪತ್ನಿ ನತಾಲಿಯಾ ಪೊಟಾನಿನಾ ಅವರು ಎಂಎಂಸಿ ನಾರಿಲಸ್ಕ್ ನಿಕೆಲ್ ಪಿಜೆಎಸ್ಸಿ ಕಂಪನಿಯ ಶೇ.50ರಷ್ಟು ಷೇರನ್ನು ಪರಿಹಾರವಾಗಿ ಬಯಸುವುದಾಗಿ ಹೇಳಿದ್ದಾರೆ.
ಲೋಹ ಉತ್ಪಾದನೆಯಲ್ಲಿ ಪೊಟಾನಿನ್ ಸುಮಾರು ಮೂರನೇ ಒಂದು ಭಾಗದಷ್ಟು ಷೇರುಗಳನ್ನು ಹೊಂದಿರುವುದರಿಂದ ಡಿವೋರ್ಸ್ ಬಳಿಕ ಅರ್ಧದಷ್ಟು ಷೇರಿನ ಮೊತ್ತವು 700 ಕೋಟಿಗೂ ಮೀರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇಷ್ಟೊಂದು ಮೊತ್ತದ ಜೀವನಾಂಶ ನೀಡಲು ತಯಾರಿಲ್ಲದ ಪೊಟಾನಿನ್ ಲಂಡನ್ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದಾರೆ.