ನಂಬರ್ ಬ್ಲಾಕ್‌ ಮಾಡಿದ ಯುವತಿಗೆ ಪಾಗಲ್ ಪ್ರೇಮಿ ತಂದ ಜೀವಕ್ಕೆ ಆಪತ್ತು

Sampriya

ಶುಕ್ರವಾರ, 12 ಸೆಪ್ಟಂಬರ್ 2025 (17:29 IST)
ಉಡುಪಿ: ಪ್ರೀತಿಸಿದ್ದ ಯುವತಿ ನಂಬರ್ ಬ್ಲಾಕ್ ಮಾಡಿದ್ದಾಳೆಂದು ಕೋಪಗೊಂಡ ಪಾಗಲ್ ಪ್ರೇಮಿ ಆಕೆಯ ಕತ್ತು ಮತ್ತು ಎದೆಗೆ ಚಾಕುವಿನಿಂದ ಇರಿದಿರುವ ಘಟನೆ ಬ್ರಹ್ಮಾವರದ ಕೊಕ್ಕರ್ಣೆಯಲ್ಲಿ ವರದಿಯಾಗಿದೆ. 

ಚಾಕು ಇರಿತಕ್ಕೊಳಗಾದ ಯುವತಿಯನ್ನು ರಕ್ಷಿತಾ ಪೂಜಾರಿ(24) ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದ ಪಾಗಲ್ ಪ್ರೇಮಿಯನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರ ಮದುವೆಗೆ ಯುವತಿಯ ಕುಟುಂಬದಿಂದ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಯುವತಿ, ಕಾರ್ತಿಕ್‌ನ ನಂಬರ್‌ ಅನ್ನು ಬ್ಲಾಕ್ ಮಾಡಿದ್ದಾಳೆ. ಕೋಪಗೊಂಡ ಕಾರ್ತಿಕ್ ಆಕೆಯ ಆಕೆ ಮನೆಯಿಂದ ಹೊರಡುವುದನ್ನು ಹಿಂಬಾಲಿಸಿ, ಆಕೆಗೆ ಚಾಕು ಇರಿದಿದ್ದಾನೆ. 

ಗಂಭೀರವಾಗಿ ಗಾಯಗೊಂಡಿರುವ ಯುವತಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನೂ ಚಾಕು ಇರಿದ ಯುವಕ ತಲೆಮರೆಸಿಕೊಂಡಿದ್ದಾನೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ