‘ವಯಸ್ಕ ಬೇಬಿ ಜೀವನಶೈಲಿ’ ಯನ್ನು ಅನುಸರಿಸಲು ಈಕೆ ತಿಂಗಳಿಗೆ ಎಷ್ಟು ಖರ್ಚು ಮಾಡುತ್ತಾಳಂತೆ ಗೊತ್ತಾ?
ಬುಧವಾರ, 26 ಫೆಬ್ರವರಿ 2020 (09:41 IST)
ಅಮೇರಿಕ: ಸಮುದಾಯದ ಇತರರು ಅನುಭವಿಸುವ ಅವಮಾನವನ್ನು ತಡೆಯಲು ಯುವತಿಯೊಬ್ಬಳು ‘ವಯಸ್ಕ ಮಗುವಿನ ಜೀವನಶೈಲಿ’ಯನ್ನು ಅನುಸರಿಸುತ್ತಿದ್ದಾಳೆ.
ಪೈಗೆ ಮಿಲ್ಲರ್ ಎಂಬ 25 ವರ್ಷದ ಯುವತಿ ‘ ವಯಸ್ಕ ಮಗುವಿನ ಜೀವನಶೈಲಿ’ಯನ್ನು ಅನುಸರಿಸುತ್ತಿದ್ದು, ಇದನ್ನು ಅವಳು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾಳೆ. ಅಲ್ಲದೇ ಅದಕ್ಕಾಗಿ ಅವಳು ತಿಂಗಳಿಗೆ 21,000ರೂಗಳನ್ನು ಡೈಪರ್ ಗಳಿಗಾಗಿ ಖರ್ಚು ಮಾಡುತ್ತಿದ್ದಾಳಂತೆ.
ಹಾಗೇ ಅವಳು ‘ವಯಸ್ಕ ಬೇಬಿ ಜೀವನಶೈಲಿ’ ಯನ್ನು ಅನುಸರಿಸುವ ಸಮುದಾಯದವಳಾಗಿದ್ದು, ಈ ಜೀವನಶೈಲಿ ಮನೆಯೊಳಗೆ ಮಾತ್ರ ಸೀಮಿತವಾಗಿರದೆ ಹೊರಗಡೆ ಕೂಡ ಮಗುವಿನ ರೀತಿ ವರ್ತಿಸುತ್ತಾಳಂತೆ. ಈ ಜೀವನಶೈಲಿಯಿಂದ ತನ್ನ ಸಮುದಾಯದ ಇತರರು ಅನುಭವಿಸುವ ಅವಮಾನವನ್ನು ತಡೆಯಲು ಆಕೆ ಇದನ್ನು ಬಹಿರಂಗಪಡಿಸುತ್ತಿರುವುದಾಗಿ ತಿಳಿಸಿದ್ದಾಳೆ.