121 ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಈ ಮರ ಇರುವುದೆಲ್ಲಿ ಗೊತ್ತಾ?

ಭಾನುವಾರ, 24 ಮಾರ್ಚ್ 2019 (10:36 IST)
ಪಾಕಿಸ್ತಾನ : ಅಪರಾಧ ಮಾಡಿದಾಗ ಮನುಷ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸುವುದನ್ನು ನಾವು ನೋಡಿದ್ದೇವೆ. ಹಾಗೇ ಪ್ರಾಣಿ ಪಕ್ಷಿಗಳು ತಪ್ಪು ಮಾಡಿದಾಗ ಅವುಗಳನ್ನು ಕಟ್ಟಿ ಹಾಕಿ ಶಿಕ್ಷಿಸುತ್ತೇವೆ. ಆದರೆ ಪಾಕಿಸ್ತಾನದಲ್ಲಿ ತಪ್ಪು ಮಾಡಿದೆ ಎಂದು ಮರವೊಂದಕ್ಕೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.


ಹೌದು. ಪಾಕಿಸ್ತಾನದಲ್ಲಿ ಆಲದ ಮರವೊಂದನ್ನು 121 ವರ್ಷಗಳಿಂದ ಬಂಧಿಸಿಡಲಾಗಿದ್ದು ಅದರ ಮುಂದೆ "ಐ ಆ್ಯಮ್ ಅಂಡರ್ ಅರೆಸ್ಟ್ " ಎಂಬ ಬೋರ್ಡ್‌ನ್ನು ನೇತು ಹಾಕಲಾಗಿದೆ. ಹಾಗಾದ್ರೆ ಆ ಮರ ಮಾಡಿದ ಅಪರಾಧವಾದರೂ ಏನು ಗೊತ್ತಾ?
1898ನೇ ವರ್ಷದಲ್ಲಿ ಆಗಿನ್ನೂ ಈ ಮರ ಗಿಡವಾಗಿದ್ದ ಸಂದರ್ಭದಲ್ಲಿ ಜೇಮ್ಸ್ ಸಕ್ವಿಡ್ ಎಂಬ ಬ್ರಿಟಿಷ್ ಸೈನ್ಯಾಧಿಕಾರಿಯೊಬ್ಬ ಕಂಠಪೂರ್ತಿ ಕುಡಿದು ಹೋಗುತ್ತಿದ್ದಾಗ ಈ ಮರ ತನ್ನನ್ನು ಅಟ್ಟಿಸಿಕೊಂಡು ಬಂದು ದಾಳಿ ಮಾಡಿದಂತೆ ಭಾಸವಾಯಿತಂತೆ. ಅದಕ್ಕಾಗಿ ತಕ್ಷಣ ಅದನ್ನು ಬಂಧಿಸುವಂತೆ ಸೈನಿಕರಿಗೆ ಆದೇಶಿಸಿದ್ದಾನೆ. ಹಾಗಾಗಿ ಅದನ್ನು ಈ ರೀತಿ ಸರಪಳಿಗಳ ಸಂಕೋಲೆಯಲ್ಲಿ ಬಂಧಿಸಿದ್ದಾರೆ.


121 ವರ್ಷಗಳಿಂದ ಈ ಆಲದ ಮರ ಪಾಕ್ ಸೇನಾ ಕಂಟೋನ್ಮೆಂಟ್‌ ಲ್ಲಿ ಬಂಧನದ ಸ್ಥಿತಿಯಲ್ಲಿಯೇ ಇದೆ. ಮರವನ್ನು ನೋಡಿ ಬಹಳಷ್ಟು ಮಂದಿ ಆ ಮರವನ್ನು ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದಾರೆ. ಆದರೆ ಬ್ರಿಟಿಷ್ ಅಧಿಕಾರಿಗಳ ಮೂರ್ಖತನಕ್ಕೆ ಸಾಕ್ಷಿಯಾಗಿರಿಸಲು ಅದನ್ನು ಹಾಗೆಯೇ ಬಂಧನದಲ್ಲಿ ಇಡಲಾಗಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ