ಮಸೀದಿಯ ಗದ್ದಲದಿಂದ ತೊಂದರೆಯಾಗುತ್ತಿದೆ ಎಂದು ದೂರು ದಾಖಲಿಸಿದ ಮಹಿಳೆಗೆ ಕೋರ್ಟ್ ಮಾಡಿದ್ದೇನು ಗೊತ್ತೇ?

ಬುಧವಾರ, 22 ಆಗಸ್ಟ್ 2018 (14:58 IST)
ಇಂಡೋನೇಷ್ಯಾ: ಮಸೀದಿಯ ಗದ್ದಲದಿಂದ ತನಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ ಚೀನಾ ಮೂಲದ ಮಹಿಳೆ ಮೀಲಿಯಾನಾ ಎಂಬುವಳಿಗೆ ದೈವನಿಂದನೆ ಆರೋಪದಲ್ಲಿ ಇಂಡೋನೇಷ್ಯಾ ಕೋರ್ಟ್‌ 18 ತಿಂಗಳ ಜೈಲುವಾಸ ಶಿಕ್ಷೆ ನೀಡಿದೆ.
44 ವರ್ಷ ವಯಸ್ಸಿನ ಈ ಮಹಿಳೆ ದೈವನಿಂದನೆ ಮಾಡುವ ಮೂಲಕ ಇಸ್ಲಾಂ ವಿರುದ್ಧ ಅಪರಾಧವೆಸಗಿದ್ದಾಳೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.



ಕೋರ್ಟಿನಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಬಳಿಕ ಆಕೆಯ ಕೈಗಳಿಗೆ ಕೋಳ ತೊಡಿಸಿ ಕೋರ್ಟಿನಿಂದ ಹೊರಗೆ ಒಯ್ಯಲಾಯಿತು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.


ಮಸೀದಿಗಳ ಧ್ವನಿವರ್ಧಕಗಳಿಂದ ತನಗೆ ತೊಂದರೆಯಾಗುತ್ತಿದೆ ಎಂದು ಮೀಲಿಯಾನಾ ದೂರು ನೀಡಿದ ಹಿನ್ನೆಲೆಯಲ್ಲಿ 2016ರ ಜುಲೈನಲ್ಲಿ ಸುಮಾತ್ರಾದ ಬಂದರು ಪಟ್ಟಣ ತಂಜುಂಗ್‌ ಬಲಾಯ್‌ನಲ್ಲಿ 14 ಬೌದ್ಧ ಮಂದಿರಗಳನ್ನು ಉದ್ರಿಕ್ತ ಗುಂಪುಗಳು ಸುಟ್ಟುಹಾಕಿದ್ದವು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ