ನೂರು ರೂ.ಗೆ ಕೊಲೆ ಮಾಡಿದವರಿಗೆ ನ್ಯಾಯಾಲಯ ಕೊಟ್ಟ ಶಿಕ್ಷೆ ಏನು ಗೊತ್ತಾ?
ಅಂಗಡಿ ಮಾಲಿಕನೊಬ್ಬನನ್ನು 100 ರೂ.ಗಳಿಗಾಗಿ ಕೊಲೆ ಮಾಡಿರುವ ಆರೋಪಿಗಳಿಬ್ಬರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಕಬಾಬ್ ಅಂಗಡಿಯೊಂದರ ಮಾಲೀಕನನ್ನು ನೂರು ರೂಪಾಯಿಗಳಿಗಾಗಿ ಇರಿದು ಕೊಂದ ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಚಿಕ್ಕಬಳ್ಳಾಪುರದ ನ್ಯಾಯಾಲಯ ಈ ಆದೇಶ ನೀಡಿದೆ. ಹರೀಶ್ ಹಾಗೂ ಶ್ರೀನಿವಾಸ್ ಅಪರಾಧಿಗಳಾಗಿದ್ದಾರೆ. ಕಬಾಬ್ ಅಂಗಡಿ ನಡೆಸುತ್ತಿದ್ದ ತಬರೇಜ್ ನನ್ನು 2016ರಲ್ಲಿ ಕುಡಿದು ಬಂದು ತಬರೇಜ್ ನನ್ನು ಅಪರಾಧಿಗಳು ಕೊಲೆ ಮಾಡಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಸರ್ವೋದಯ ಶೆಟ್ಟಿಗಾರ್ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.