ಬೈಡು ಸಂಸ್ಥೆಯ CEOಗೆ ವೇದಿಕೆ ಮೇಲೆ ಯುವಕನೊಬ್ಬ ಮಾಡಿದ್ದೇನು ಗೊತ್ತಾ?

ಶುಕ್ರವಾರ, 5 ಜುಲೈ 2019 (09:05 IST)
ಚೀನಾ : ಬುಧವಾರ ನಡೆದ ಚೀನಾದ ಸರ್ಚ್ ಇಂಜಿನ್ ದೈತ್ಯ ಬೈಡು ವಾರ್ಷಿಕ ಸಮ್ಮೇಳನದ ವೇಳೆ ವೇದಿಕೆ ಮೇಲೆಯೇ ಸಂಸ್ಥೆಯ CEO ರಾಬಿನ್ ಲಿ ತಲೆಯ ಮೇಲೆ ವ್ಯಕ್ತಿಯೊಬ್ಬ ಬಾಟಲಿನಲ್ಲಿದ್ದ ನೀರು ಸುರಿದ ಘಟನೆ ನಡೆದಿದೆ.




CEO ರಾಬಿನ್ ಲಿ ವಾರ್ಷಿಕ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ ವಿಚಾರದ ಬಗ್ಗೆ ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆ ಅಪರಿಚಿತ ಯುವಕನೊಬ್ಬ ವೇದಿಕೆಯ ಮೇಲೆ ಬಂದು ಲಿ ತಲೆಯ ಮೇಲೆ ನೀರಿನ ಬಾಟಲಿಯನ್ನು ಸುರಿದು ಹೊರನಡೆದಿದ್ದಾನೆ.
ಈ ಘಟನೆಯಿಂದ ಕೋಪಗೊಂಡ ರಾಬಿನ್ ಲಿ, “ನಿಮ್ಮ ಸಮಸ್ಯೆ ಏನು?” ಎಂದು ಕೂಗಿದ್ದಾರೆ. ಬಳಿಕ ತಮ್ಮನ್ನು ತಾವು ಸಮಾಧಾನ ಪಡಿಸಿಕೊಂಡು, ‘ಸಾಧನೆಯ ಮಾರ್ಗದಲ್ಲಿ ಈ ರೀತಿಯ ತೊಂದರೆ ಎದುರಾಗುವುದು ಸಹಜ. ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದ್ದಾರೆ.


ಲಿ ಮೇಲೆ ನೀರು ಸುರಿದ ವ್ಯಕ್ತಿ ಯಾರು? ಆತನ ಉದ್ದೇಶವೇನು ಎಂಬುದು ತಿಳಿದುಬಂದಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ