ಸುಧಾರಿತ ಜೀವನ ನಡೆಸಲು ಲೈಂಗಿಕ ಕ್ರಿಯೆಯಲ್ಲಿ 669 ಸೂತ್ರ ಪಾಲಿಸಿ ಎಂದ ಅಲಿಬಾಬ ಕಂಪೆನಿ ಸಂಸ್ಥಾಪಕ

ಬುಧವಾರ, 15 ಮೇ 2019 (07:25 IST)
ನವದೆಹಲಿ : ಸುಧಾರಿತ ಜೀವನ ನಡೆಸಲು ವಾರದಲ್ಲಿ 6 ದಿನ, 6 ಸಲ ಲೈಂಗಿಕ ಕ್ರಿಯೆ ನಡೆಸಿ 669 ಸೂತ್ರ ಪಾಲಿಸಿ ಎನ್ನುವ ಮೂಲಕ ಚೀನಾ ಮೂಲದ ಅಲಿಬಾಬ ಕಂಪೆನಿ ಸಂಸ್ಥಾಪಕ ಜಾಕ್ ಮಾ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.




ಈ ಹಿಂದೆ ಅಲಿಬಾಬ ಕಂಪನಿಯ ಆಂತರಿಕ ಸಭೆಯೊಂದರಲ್ಲಿ ಮಾತನಾಡಿದ ಜಾಕ್​​ ಮಾ, ದಿನಕ್ಕೆ 12 ಗಂಟೆಗಳಂತೆ ವಾರದ 6 ದಿನಗಳಲ್ಲಿ ಶ್ರಮಿಸಬಲ್ಲ ಉದ್ಯೋಗಿಗಳು ಮಾತ್ರ ತಮ್ಮ ಕಂಪನಿಗೆ ಬೇಕು, ಉಳಿದವರಿಗೆ ಇಲ್ಲಿ ಜಾಗವಿಲ್ಲ ಎಂದಿದ್ದರು. ಅಲ್ಲದೇ ಚೀನಾದ ತಂತ್ರಜ್ಞಾನ ಕಂಪನಿಗಳ ವಲಯದಲ್ಲಿ '996 ಗಂಟೆ ದುಡಿಯುವ ಸಿಸ್ಟಮ್‌' ಚಾಲ್ತಿಯಲ್ಲಿದೆ. ಅಂದರೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಗಳ ಕಾಲ ವಾರದ 6 ದಿನಗಳ ದುಡಿಮೆ ಅರ್ಥ ಇದಾಗಿದೆ ಎಂದಿದ್ದರು. ದಿನಕ್ಕೆ '996' ರೀತಿಯಲ್ಲಿ ದುಡಿಯುವ ಸಾಮರ್ಥ್ಯ‌ ಯುವಜನತೆಗೆ ಇರುವುದು ದೊಡ್ಡ ಆಶೀರ್ವಾದ. ಇದನ್ನು ನಾವು ಬಳಸಿಕೊಳ್ಳಬೇಕು ಎಂದು ಜಾಕ್ ಮಾ ಹೇಳಿದ್ದರು.


ಆದರೆ ಚೀನಾದ ಕಾರ್ಮಿಕ ಕಾನೂನುಗಳ ಪ್ರಕಾರ ದಿನಕ್ಕೆ 8 ಗಂಟೆಗಿಂತ ಹೆಚ್ಚು ಕಾಲ ಸಿಬ್ಬಂದಿಯನ್ನು ದುಡಿಸುವಂತಿಲ್ಲ.ಆದ್ದರಿಂದ ಜಾಕ್ ಮಾ ಅವರ ಈ ಹೇಳಿಕೆ ಕುರಿತು ಚೀನಾ ಜನತೆ ಬಾರೀ ವಿರೋಧ ವ್ಯಕ್ತಪಡಿಸಿದ್ದರು.
ಆದರೆ ಇದೀಗ ಅಲಿಬಾಬ ಸಂಸ್ಥೆಯ ಸಿಬ್ಬಂದಿಗಳ ವಿವಾಹ ಸಮಾರಂಭದಲ್ಲಿ ಮಾತನಾಡಿದ್ದ ಜಾಕ್​​ ಮಾ,  ಮನೆ ಮತ್ತು ಕೆಲಸ ಎರಡನ್ನೂ ಹೊಂದಾಣಿಕೆ ಮಾಡಿಕೊಂಡು ಸುಧಾರಿತ ಜೀವನ ನಡೆಸಲು ವಾರದಲ್ಲಿ 6 ದಿನ, 6 ಸಲ ಲೈಂಗಿಕ ಕ್ರಿಯೆ ನಡೆಸಿ 669 ಸೂತ್ರ ಪಾಲಿಸಿ ಎಂದು ತಮ್ಮ ಸಿಬ್ಬಂದಿಗಳಿಗೆ ಸಲಹೆ ನೀಡಿ ಇದೀಗ ಮತ್ತೆ ವಿವಾದಕ್ಕೀಡಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ