ವಿಮಾನದಲ್ಲಿ ಮದ್ಯ ಸೇವಿಸಿ ರಂಪಾಟ ಮಾಡುತ್ತಿದ್ದ ವ್ಯಕ್ತಿಗೆ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?

ಶನಿವಾರ, 21 ಡಿಸೆಂಬರ್ 2019 (06:25 IST)
ರಷ್ಯಾ: ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ವಿಮಾನದಲ್ಲಿ ಪ್ರಯಾಣಿಸುವ ವೇಳೆ ರಂಪಾಟ ಮಾಡಿದ್ದು, ಆತನಿಗೆ ಪ್ರಯಾಣಿಕರು ತಕ್ಕ ಶಾಸ್ತಿ ಮಾಡಿದ್ದಾರೆ.




ರಷ್ಯಾದಲ್ಲಿ ವಿಮಾನ ಹತ್ತಿದ್ದ ವ್ಯಕ್ತಿ ಕಂಠಪೂರ್ತಿ ಕುಡಿದಿದ್ದ. ವಿಮಾನದೊಳಗೆ ಪ್ರವೇಶಿಸಿದ ತಕ್ಷಣ ಸಿಬ್ಬಂದಿಯೊಂದಿಗೆ ಅತಿರೇಕವಾಗಿ ವರ್ತಿಸಿದ್ದಲ್ಲದೇ ಕ್ಯಾಪ್ಟನ್ ಜೊತೆ ಮಾತನಾಡಬೇಕೆಂದು ಕಾಕ್ ಪಿಟ್ ಪ್ರವೇಶಿಸಲು ಪ್ರಯತ್ನಿಸಿದ್ದಾನೆ.


 ಆ ವೇಳೆ ಆತನನ್ನು ತಡೆದ ಪ್ರಯಾಣಿಕರು, ಆತನನ್ನು ನಿಯಂತ್ರಿಸಲು ಟೇಪುಗಳಿಂದ ಸುತ್ತಿ ಸೀಟಿಗೆ ಬಿಗಿದು ಕೂರಿಸಿದ್ದಾರೆ. ಇದರಿಂದ ಕೋಪಗೊಂಡ ಆತ ಬಾಯಿಗೆ ಬಂದಂತೆ ಬಯ್ಯುತ ಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ