ಡೇವಿಡ್‌ ಕ್ಲಾವಿನ್ಸ್‌ ಸೃಷ್ಟಿಸಿದ ಜಗತ್ತಿನ ಅತಿದೊಡ್ಡ ಪಿಯಾನೋ ಎಲ್ಲಿದೆ ಗೊತ್ತಾ?

ಸೋಮವಾರ, 29 ಜುಲೈ 2019 (08:40 IST)
ಜರ್ಮನ್ : ಸಂಗೀತದ ವಿಚಾರದಲ್ಲಿ ಅತಿ ಎತ್ತರಕ್ಕೆ ಏರುತ್ತಿರುವ ಜರ್ಮನ್ ಮೂಲದ ಸಂಶೋಧಕನೊಬ್ಬ ವಿಶ್ವದಲ್ಲಿ ಅತಿ ದೊಡ್ಡ ಪಿಯಾನೋವೊಂದನ್ನು ಸೃಷ್ಟಿಸಿದ್ದಾನೆ.



ಲ್ಯಾಟ್ವಿಯಾದ ಕನ್ಸರ್ಟ್‌ ಹಾಲ್‌ ನ ಗೋಡೆಯ ಮೇಲೆ ಎತ್ತರಕ್ಕೆ ಜೋಡಿಸಲಾದ ಉಕ್ಕಿನ ಚೌಕಟ್ಟಿನ ಈ ಗ್ರ್ಯಾಂಡ್ ಪಿಯಾನೋ ಪ್ರೇಕ್ಷಕರಿಗೆ ಮೂರನೇ ಮಹಡಿಯ ಮಧ್ಯದಲ್ಲಿ ಕಾಣಿಸುತ್ತದೆ. ಇದನ್ನು ನುಡಿಸಲು ಪಿಯಾನೋ ವಾದಕರು ಉಕ್ಕಿನ ಮೆಟ್ಟಿಲುಗಳ ಮೇಲೆ ಸಾಗಿ ಬಾಲ್ಕನಿ ಏರಬೇಕು.


1987ರಲ್ಲಿ ಅನಾವರಣಗೊಂಡ ವಿಶ್ವದ ಅತಿ ದೊಡ್ಡ ಪಿಯಾನೋ ಎಂದು ಪರಿಗಣಿಸಲಾದ ಮಾಡೆಲ್ 370 ಪಿಯಾನೋ ಸೃಷ್ಟಿಕರ್ತ ಡೇವಿಡ್‌ ಕ್ಲಾವಿನ್ಸ್‌ ಇದೀಗ ಈ ದೊಡ್ಡ ಪಿಯಾನೋವನ್ನು ಸೃಷ್ಟಿಸಿದ್ದು, 450i ಗ್ರಂಡ್‌ ಎಂಬ ಹೆಸರಿನ ಈ ಪಿಯಾನೋ 4.5 ಮೀಟರ್‌ ಎತ್ತರವಿದೆ. ಮಾಡೆಲ್ 370 ಪಿಯಾನೋ ಗಿಂತ ಇದು ಒಂದು ಮೀಟರ್ ಎತ್ತರವಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ