ಹೃದಯಾಘಾತದಿಂದ ಸಾವನಪ್ಪುವುದನ್ನು ತಡೆಯಲು ಸಂಶೋಧಕರು ಕಂಡುಹಿಡಿದಿದ್ದಾರೆ ಈ ಟಾಯ್ಲೆಟ್ ಸೀಟ್
ಗುರುವಾರ, 30 ಮೇ 2019 (07:00 IST)
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೃದಯಾಘಾತದಿಂದ ಸಾವನಪ್ಪುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಯಲು ಸಂಶೋಧಕರ ತಂಡವೊಂದು ಹೊಸ ವಿಧಾನವೊಂದನ್ನು ಕಂಡುಹಿಡಿದಿದೆ.
ರೋಚೆಸ್ಟರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಆರ್‌ಐಟಿ) ಟಾಯ್ಲೆಟ್ ಸೀಟ್‌ನಲ್ಲಿ ಕಾರ್ಡಿಯೋವಾಸ್ಕ್ಯುಲರ್ ಮಾನಿಟರಿಂಗ್ ವ್ಯವಸ್ಥೆಯನ್ನು ಅಳವಡಿಸುವ ಸ್ಮಾರ್ಟ್ ಟಾಯ್ಲೆಟ್‌ಗಳನ್ನು ತಯಾರಿಸಿದ್ದು, ಆಸ್ಪತ್ರೆಯಿಂದ ತೆರಳಿದ ರೋಗಿಗಳಿಗೆ ನೀಡಲು ಶಿಫಾರಸು ಮಾಡಿದೆ. ಸಂಶೋಧಕರು ರೋಗಿಯ ಹೃದಯದ ಆರೋಗ್ಯ, ರಕ್ತದ ಪರಿಚಲನೆಯ ವಿವರಗಳನ್ನು ಆಸ್ಪತ್ರೆಯಿಂದ ತೆರಳಿದ ಬಳಿಕವೂ ಗಮನಿಸುವ ನಿಟ್ಟಿನಲ್ಲಿ ಈ ಪರಿಕಲ್ಪನೆಯನ್ನು ಕಂಡುಕೊಂಡಿದ್ದಾರೆ ಎನ್ನಲಾಗಿದೆ.
ಸ್ಮಾರ್ಟ್ ಟಾಯ್ಲೆಟ್‌ಗಳು, ರೋಗಿಗಳ ತೂಕ, ಹೃದಯ ಬಡಿತದ ಪ್ರಮಾಣ, ರಕ್ತದೊತ್ತಡ ಸೇರಿದಂತೆ ಇನ್ನಿತರ ಪರಿಮಾಣಗಳನ್ನು ಅಳೆಯುತ್ತದೆ. ಆಕ್ಸಿಜನ್ ಪ್ರಮಾಣ, ಸ್ಕ್ರೋಕ್ ವಾಲ್ಯುಮ್‌ಗಳ ಡೇಟಾವನ್ನು ಸ್ಮಾರ್ಟ್ ಟಾಯ್ಲೆಟ್‌ನಲ್ಲಿನ ಸೆನ್ಸರ್ ಸಂಗ್ರಹಿಸುತ್ತದೆ. ಈ ಸೆನ್ಸರ್‌ಗಳು ರೋಗಿಯ ಆರೋಗ್ಯ ಸ್ಥಿತಿಯ ಕುರಿತು ಮೊದಲೇ ವೈದ್ಯರಿಗೆ ಎಚ್ಚರಿಕೆ ನೀಡುತ್ತದೆ.