ಮಹಿಳೆಯರು ಯಾವ ವಯಸ್ಸಿನಲ್ಲಿ ಲೈಂಗಿಕ ತೃಪ್ತಿ ಅನುಭವಿಸುತ್ತಾರಂತೆ ಗೊತ್ತಾ?

ಮಂಗಳವಾರ, 26 ಮಾರ್ಚ್ 2019 (10:21 IST)
ಬೆಂಗಳೂರು : ಮಹಿಳೆಯರಿಗೆ ಯಾವ ವಯಸ್ಸಿನಲ್ಲಿ ಲೈಂಗಿಕ ತೃಪ್ತಿ ಸಿಗುತ್ತದೆ ಎಂಬುದನ್ನು ಇದೀಗ ಹೊಸ ಸಂಶೋಧಕರು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.


ಹೌದು. ಈ ಹಿಂದೆ ಈ ಬಗ್ಗೆ ಹಲವು ಸಂಶೋಧನೆಗಳು ನಡೆದಿದ್ದವು. ಆದರೆ  ಅವುಗಳಿಂದ ನಿಖರ ಉತ್ತರ ದೊರಕಿರಲಿಲ್ಲ. ಆದರೆ ಇತ್ತೀಚೆಗೆ ನ್ಯಾಚುರಲ್‌ ಸೈಕಲ್‌ ಎಂಬ ಸಂಸ್ಥೆ ನಡೆಸಿದ ಈ ಸಮೀಕ್ಷೆಯಲ್ಲಿ ಮಹಿಳೆಯರಿಗೆ ತಮ್ಮ 36ನೇ ವಯಸ್ಸಿನಲ್ಲಿ ಸಂಪೂರ್ಣ ಲೈಂಗಿಕ ಸುಖ ಸಿಗುತ್ತದೆ ಎಂದು ತಿಳಿದುಬಂದಿದೆ.


ಈ ಸಂಶೋಧನೆಯಲ್ಲಿ 23 ವರ್ಷದ ಯುವತಿಯರು, 25 ರಿಂದ 30 ವರ್ಷದ ಮಹಿಳೆಯರು ಹಾಗೂ 30 ರಿಂದ 36 ವರ್ಷ ಹಾಗೂ ಅದಕ್ಕಿಂತಲೂ ಹೆಚ್ಚಿನ ವಯಸ್ಸಿನ ಹೆಂಗಸರು ಪಾಲ್ಗೊಂಡಿದ್ದು,  ಅವರಿಗೆ ಲೈಂಗಿಕ ಪರಾಕಾಷ್ಠೆ, ಸಂಗಾತಿಯೊಂದಿಗಿನ ಮಿಲನ, ಲೈಂಗಿಕ ಬಂಧದ ಅನುಭವ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು ಈ ವೇಳೆ ಹೆಚ್ಚಿನ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಅಧಿಕ ಮಂದಿ 36ನೇ ವಯಸ್ಸಿನಲ್ಲಿ ಹೆಚ್ಚು ಸುಖ ಪಡೆದಿರುವುದಾಗಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ