ಚೀನಾದ ಈ ಹೋಟೆಲ್ ಅನ್ನು ಮುಚ್ಚುವ ಪರಿಸ್ಥಿತಿ ಬಂದಿದ್ದಾರೂ ಯಾಕೆ ಗೊತ್ತೇ?
ಶನಿವಾರ, 15 ಸೆಪ್ಟಂಬರ್ 2018 (16:56 IST)
ಬೀಜಿಂಗ್: ಗರ್ಭಿಣಿ ಹಾಗೂ ಅವಳ ಗಂಡ ರಾತ್ರಿ ಊಟಕ್ಕಾಗಿ ಚೀನಾದ ಹೋಟೆಲ್ ವೊಂದಕ್ಕೆ ಹೋಗಿದ್ದರು. ಮಹಿಳೆ ಸೂಪ್ ಸೇವಿಸುತ್ತಿದ್ದ ವೇಳೆ ಆ ಸೂಪ್ ನಲ್ಲಿ ಇಲಿ ಪತ್ತೆಯಾಗಿದ್ದು ಇದರಿಂದ ಈ ರೆಸ್ಟೊರೆಂಟ್ ಅನ್ನು ಈಗ ಮುಚ್ಚವ ಪರಿಸ್ಥಿತಿ ಬಂದಿದೆ.
ಹೋಟೆಲ್‌ನವರು ತಂದು ಕೊಟ್ಟ ಸೂಪ್‌ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದೆ. ಇದನ್ನು ದಂಪತಿ ಹೋಟೆಲ್ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. 'ಈ ವಿಷಯವನ್ನು ಹೊರಗಡೆ ತಿಳಿಸದಂತೆ ಹಾಗೂ ಇಲಿ ಬಿದ್ದ ಸೂಪ್ ಕುಡಿದಿದ್ದರಿಂದ ಭ್ರೂಣಕ್ಕೆ ತೊಂದರೆಯಾಗಬಹುದು ಎಂಬ ಕಾರಣದಿಂದ ಗರ್ಭಪಾತ ಮಾಡಿಸುವಂತೆ 3,000 ಡಾಲರ್ ನಗದು ನೀಡಲು ಹೋಟೆಲ್ ಸಿಬ್ಬಂದಿ ಮುಂದಾದರು. ಆದರೆ ಅದನ್ನು ನಾವು ನಿರಾಕರಿಸಿದ್ದು, ಈ ಕುರಿತು ಕುಯಿವನ್ ಜಿಲ್ಲೆಯ ಮಾರುಕಟ್ಟೆ ಮೇಲ್ವಿಚಾರಣಾ ಮಂಡಳಿಗೆ ದೂರು ನೀಡಿದ್ದೇವೆ,' ಎಂದು ದಂಪತಿ ತಿಳಿಸಿದ್ದಾರೆ. ದೂರು ಸ್ವೀಕರಿಸಿರುವ ಅಧಿಕಾರಿಗಳು ತನಿಖೆ ನಡೆಸಿದ್ದು, ತನಿಖೆ ಮುಗಿಯುವವರಿಗೂ ರೆಸ್ಟೋರೆಂಟ್ ಮುಚ್ಚಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ