ಹೋಟೆಲ್ ಗಳಲ್ಲಿ ಸ್ವಚ್ಛತೆ ಕಾಪಾಡಲು ಗ್ರಾಹಕರ ಆಗ್ರಹ

ಭಾನುವಾರ, 9 ಸೆಪ್ಟಂಬರ್ 2018 (17:55 IST)
ಗಡಿ ಜಿಲ್ಲೆ ಬೀದರ್ ನಲ್ಲಿ ಹೋಟಲ್ ದಂಧೆ ಅಂದ್ರೆ ಅದು ಖುಲ್ಲಂ ಖುಲ್ಲಾ... ಇಲ್ಲಿ ಹೇಳೋರು ಕೇಳೋರು ಯಾರು ಇಲ್ಲಾ... ಆ ಜಿಲ್ಲೆಯ ಬಹುತೇಕ ಹೋಟಲ್ ಗಳಲ್ಲಿ ಓಪನ್ ಆಗಿ ಕಳಪೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಆದರೂ ಅಧಿಕಾರಿಗಳು ರೇಡ್ ಮಾಡೋದು ಇರಲಿ ಇತ್ತ ನೋಡುತ್ತಲು ಇಲ್ಲಾ ಎಂದು ಗ್ರಾಹಕರು ದೂರಿದ್ದಾರೆ.

ಕಳೆದೊಂದು ವರ್ಷದಿಂದ  ಆಹಾರ ಪರಿಶೀಲನೆ ಮಾಡಲು ಇಲ್ಲಿನ  ಆಹಾರ ಸುರಕ್ಷತಾ ಅಧಿಕಾರಿಗಳು ಮುಂದಾಗಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದರಿಂದಾಗಿ ಬೀದರ್ ನಗರದ ಬಹುತೇಕ ಹೋಟಲ್ ಗಳು ಕಳಪೆ ಆಹಾರ ಪೂರೈಕೆ ತಾಣವಾಗಿವೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಅಧಿಕಾರಿಗಳು ಮಾತ್ರ ಎಲ್ಲವು ಗೊತ್ತಿದ್ದರೂ ಸೈಲೆಂಟ್ ಆಗಿದ್ದಾರೆ ಎನ್ನುತ್ತಿದ್ದಾರೆ ಗ್ರಾಹಕರು. ಹೋಟಲ್ ಗಳಲ್ಲಿ  ಕಳಪೆ ಆಹಾರ ನೀಡುತ್ತಿದ್ದು,  ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.

ಗಡಿ ಜಿಲ್ಲೆ ಬೀದರ್ ನ  ಬಹುತೇಕ ಹೋಟಲ್ ಗಳಲ್ಲಿ  ಸ್ವಚ್ಛತೆ ಇಲ್ಲವೇ ಇಲ್ಲಾ. ಈ ಹೋಟಲ್ ಮಾಲೀಕರಿಗೆ ಮಾತ್ರ ಯಾರ ಅಂಜಿಕೆಯೂ ಇಲ್ಲ. ಕಾರಣ ಆಹಾರ ಪರಿಶೀಲನೆ ಮಾಡೋ ಆಹಾರ ಸುರಕ್ಷತಾ ಗುಣ ಮಟ್ಟದ ಅಧಿಕಾರಿಗಳು ಮಾತ್ರ ಇತ್ತ ಸುಳಿಯುತ್ತಿಲ್ಲ.  ಯಾಕೆ ಅಂತಾ ಮಾತ್ರ ಗೊತ್ತಿಲ್ಲ. ಇಲ್ಲಿನ ಹೋಟಲ್ ಗಳಲ್ಲಿ  ಆಹಾರ ಗುಣಮಟ್ಟ ಹೇಗಿದೆ ಅನ್ನೋದು ಒಮ್ಮೆಯೂ ಅಧಿಕಾರಿಗಳು ಪರಿಶೀಲನೆ ಮಾಡಲು ಮುಂದಾಗಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.  



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ