ಚೀನಾ ಗಡಿ ಕಿರಿಕ್ ಭಾರತಕ್ಕೆ ಸಿಕ್ಕಿದೆ ಬೂಸ್ಟ್!

ಭಾನುವಾರ, 13 ಆಗಸ್ಟ್ 2017 (05:31 IST)
ನವದೆಹಲಿ: ಡೋಕ್ಲಾಂ ಗಡಿ ವಿವಾದದಲ್ಲಿ ಭಾರತದ ವಿರುದ್ಧ ಪದೇ ಪದೇ ಚೀನಾ ಕಿಡಿ ಕಾರುತ್ತಿದ್ದರೆ, ಭಾರತ ಮಾತ್ರ ಮೌನಕ್ಕೆ ಶರಣಾಗಿದೆ. ಆದರೆ ಭಾರತದ ಈ ಪ್ರಬುದ್ಧ ನಡೆಗೆ ದೊಡ್ಡಣ್ಣ ಅಮೆರಿಕಾ ಬೆಂಬಲ ಸಿಕ್ಕಿದೆ.

 
ಇದು ಭಾರತದ ಪಾಲಿಗೆ ಸಕಾರಾತ್ಮಕ ಅಂಶವಾಗಲಿದೆ. ಗಡಿ ವಿಚಾರದಲ್ಲಿ ಚೀನಾ ಎಳಸು ಎಂದು ತೋರಿಸುತ್ತಿದೆ. ಆದರೆ ಭಾರತ ತನ್ನ ಗಡಿ ವಿಚಾರದಲ್ಲಿ ರಾಜಿಯೂ ಮಾಡಿಕೊಳ್ಳದೆ, ಇತ್ತ ವಿವಾದಕ್ಕೆ ಬೆಂಕಿ ಹಚ್ಚುವ ಕೆಲಸವನ್ನೂ ಮಾಡದೆ ಪ್ರಬುದ್ಧತೆ ಮೆರೆದಿದೆ ಎಂದು ಅಮೆರಿಕಾದ ವಿದೇಶಾಂಗ ತಜ್ಞರು ಹೊಗಳಿದ್ದಾರೆ.

ಭಾರತದ ಪ್ರಧಾನಿ ಮೋದಿ ಅಮೆರಿಕಾ ಅಧ್ಯಕ್ಷರ ಜತೆಗೆ ಮೈತ್ರಿ ಮಾತುಕತೆ ನಡೆಸಿದ ಮೇಲೆ ಆ ದೇಶದ ಬೆಂಬಲ ಭಾರತದ ಕಡೆಗಿದೆ. ಅಲ್ಲದೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಡೋಕ್ಲಾಂ ಗಡಿ ಹಂಚಿಕೊಳ್ಳುತ್ತಿರುವ ಇನ್ನೊಂದು ರಾಷ್ಟ್ರ ಭೂತಾನ್ ವಿದೇಶಾಂಗ ಸಚಿವರೊಂದಿಗೂ ಈ ಕುರಿತು ಯಶಸ್ವಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಚೀನಾ ಖ್ಯಾತೆ ತೆಗೆಯುತ್ತಿದ್ದರೂ, ಭಾರತದ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ