ಡೊನಾಲ್ಡ್ ಟ್ರಂಪ್ ವಾರ್ಷಿಕ ಸಂಬಳ 67 ರೂಪಾಯಿ

ಸೋಮವಾರ, 14 ನವೆಂಬರ್ 2016 (18:36 IST)
ಅಮೇರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಸಂಬಳವನ್ನು ಪಡೆಯಲು ನಿರಾಕರಿಸಿದ್ದು. ವರ್ಷಕ್ಕೆ 1 ಡಾಲರ್ (67 ರೂಪಾಯಿ) ಪಡೆಯುವುದಾಗಿ ಹೇಳಿದ್ದಾರೆ. 

ಸಿಬಿಎಸ್ ವಾಹಿನಿಯ ಜತೆ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಚಾರ ಸಂದರ್ಭದಲ್ಲಿ ಹೇಳಿದಂತೆ ತಾವು ಸಂಬಳವನ್ನು ಪಡೆಯುವುದಿಲ್ಲ ಎಂದು ಪುನರುಚ್ಛರಿಸಿದ್ದಾರೆ. ಜತೆಗೆ ರಜೆಯನ್ನು ಪಡೆಯುವುದಿಲ್ಲವೆಂದು ಹೇಳಿದ್ದಾರೆ. 
 
ನನಗೆ ಜನರಿಗಾಗಿ ಬಹಳಷ್ಟು ಕೆಲಸ ಮಾಡುವುದಿದೆ. ಹೀಗಾಗಿ ರಜೆಯನ್ನು ತೆಗೆದುಕೊಳ್ಳುವುದಿಲ್ಲ. ನನಗೆ ಸಂಬಳವೂ ಬೇಡ. ಕಾನೂನಿನ ಪ್ರಕಾರ ತೆಗೆದುಕೊಳ್ಳಲೇ ಬೇಕೆಂದಿದ್ದರೆ ವರ್ಷಕ್ಕೆ 1 ಡಾಲರ್ ಸಾಕು ಎಂದಿದ್ದಾರೆ ಟ್ರಂಪ್.
 
ಅಧ್ಯಕ್ಷ ಹುದ್ದೆಗೆ ಎಷ್ಟು ಸಂಬಳವಿದೆ ಎಂಬ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಒಪ್ಪಿಕೊಂಡ ಅವರಿಗೆ,  $400,000 ಸಂಬಳ ಎಂದು ಹೇಳಲಾಯಿತು. ಆದರೆ ನಾನದನ್ನು ಸ್ವೀಕರಿಸಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
 
ನಾನು ಅಧಿಕಾರ ಸ್ವೀಕರಿಸಿದ ತಕ್ಷಣ ತೆರಿಗೆಯನ್ನು ಸಬಹ ಕಡಿಮೆ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.
 
ಕಳೆದ ವಾರ ನಡೆದ ಚುನಾವಣೆಯಲ್ಲಿ ಟ್ರಂಪ್ ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಿ ಅಮೇರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ