ಅಮೆರಿಕಾದ ವಿವಿಗಳಲ್ಲೂ ಇನ್ನು ಚೀನಿಯರಿಗೆ ನೋ ಎಂಟ್ರಿ: ಟ್ರಂಪ್ ಘೋಷಣೆ

ಶನಿವಾರ, 30 ಮೇ 2020 (10:26 IST)
ನ್ಯೂಯಾರ್ಕ್: ಕೊರೋನಾವೈರಸ್ ನ್ನು ಹರಡಿದ ಚೀನಾ ವಿರುದ್ಧ ಗುಟುರು ಹಾಕುತ್ತಲೇ ಇರುವ ಅಮೆರಿಕಾ ಈಗ ಮಹತ್ವದ ನಿರ್ಧಾರಕ್ಕೆ ಬಂದಿದೆ.


ಚೀನಾದ ವಿದ್ಯಾರ್ಥಿಗಳಿಗೆ ಅಮೆರಿಕಾ ವಿವಿಗಳಲ್ಲಿ ಅಭ‍್ಯಾಸ ಮಾಡಲೂ ಅವಕಾಶವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಹಲವು ಚೀನಾ ಬಹಿಷ್ಕರಿಸುವ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

ವಿಶ್ವಸಂಸ್ಥೆಯಲ್ಲೂ ಅಮೆರಿಕಾ ಸಂಬಂಧಕ್ಕೆ ಕತ್ತರಿ ಹಾಕಿರುವ ಟ್ರಂಪ್, ಇಲ್ಲಿ ಚೀನಾ ಪ್ರಾಬಲ್ಯವೇ ಹೆಚ್ಚಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಹಾಂಗ್ ಕಾಂಗ್ ನ ಸ್ವಾಯತ್ತ ಸ್ಥಾನಮಾನವನ್ನು ರದ್ದುಗೊಳಿಸಿದ ಚೀನಾ ನಿರ್ಧಾರವನ್ನೂ ಅವರು ಕಟುವಾಗಿ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ