ಕೊರೋನಾಗೆ ಮಲೇರಿಯಾ ಔಷಧ ಕೊಡದಿದ್ದರೆ ಭಾರತಕ್ಕೆ ಪ್ರತೀಕಾರದ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

ಮಂಗಳವಾರ, 7 ಏಪ್ರಿಲ್ 2020 (10:01 IST)
ನವದೆಹಲಿ: ಕೊರೋನಾ ನಿಯಂತ್ರಿಸಲು ಹೆಣಗಾಡುತ್ತಿರುವ ಅಮೆರಿಕಾ ಈಗ ಔಷಧಕ್ಕಾಗಿ ಭಾರತದ ಬೆನ್ನು ಬಿದ್ದಿದೆ. ಭಾರತದಲ್ಲಿ ಕೊರೋನಾಗೆ ಮಲೇರಿಯಾ ಔಷಧ ನೀಡಿದ ಬಗ್ಗೆ ವರದಿಯಾದ ಬೆನ್ನಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಈ ಔಷಧಿಯನ್ನು ಅಮೆರಿಕಾಗೂ ಒದಗಿಸುವಂತೆ ಮನವಿ ಮಾಡಿದ್ದರು.


ಒಂದು ವೇಳೆ ಭಾರತ ಮಲೇರಿಯಾ ಔಷಧ ಕೊಡದೇ ಹೋದಲ್ಲಿ ಪ್ರತೀಕಾರ ತೀರಿಸುವುದಾಗಿ ಬೆದರಿಸುವ ತಂತ್ರ ಮಾಡಿದ್ದಾರೆ ಟ್ರಂಪ್. ಆ ಮೂಲಕ ತಮ್ಮ ಹತಾಶೆಯನ್ನು ಹೊರಹಾಕಿದ್ದಾರೆ.

ಭಾನುವಾರ ಭಾರತದ ಪ್ರಧಾನಿ ಮೋದಿ ಜತೆ ದೂರವಾಣಿ ಮಾತುಕತೆ ನಡೆಸಿದ್ದ ಟ್ರಂಪ್ ಮಲೇರಿಯಾಗೆ ನೀಡುವ ಔಷಧ ಹೈಡ್ರೋಕ್ಸಿಕ್ಲೋರೋಕ್ಸಿನ್ ತಮ್ಮ ದೇಶಕ್ಕೆ ಒದಗಿಸುವಂತೆ ಮನವಿ ಮಾಡಿದ್ದರು. ಒಂದು ವೇಳೆ ಭಾರತ ತಮ್ಮ ಮನವಿಯನ್ನು ಪುರಸ್ಕರಿಸದೇ ಹೋದಲ್ಲಿ ಅದಕ್ಕೆ ತಕ್ಕ ಪ್ರತೀಕಾರ ತೀರಿಸಲೂ ಹಿಂದೆ ಮುಂದೆ ನೋಡಲ್ಲ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ