ಕೊನೆಗೂ ಕೊರೋನಾದಿಂದ ಮುಕ್ತಳಾದ ಗಾಯಕಿ ಕನಿಕಾ ಕಪೂರ್

ಸೋಮವಾರ, 6 ಏಪ್ರಿಲ್ 2020 (10:54 IST)
ಮುಂಬೈ: ವಿದೇಶದಿಂದ ಬಂದು ಸರಿಯಾಗಿ ಏಕಾಂತ ಅವಧಿಯಲ್ಲಿ ಕಳೆಯದೇ ಪಾರ್ಟಿ ಮಾಡಿ ಆತಂಕ ಸೃಷ್ಟಿಸಿದ್ದ ಕೊರೋನಾ ಪೀಡಿತ ಗಾಯಕಿ ಕನಿಕಾ ಕಪೂರ್ ಇದೀಗ ಚೇತರಿಸಿಕೊಂಡಿದ್ದಾರೆ.


ಕೊರೋನಾದಿಂದಾಗಿ ಲಕ್ನೋದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕನಿಕಾಗೆ ಕೊನೆಗೂ ಆರನೆಯ ಬಾರಿಯ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಹೀಗಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

ಕಳೆದ ವಾರವಷ್ಟೇ ಆಕೆ ಇನ್ ಸ್ಟಾಗ್ರಾಂನಲ್ಲಿ ಭಾವುಕರಾಗಿ ಸಂದೇಶ ಬರೆದಿದ್ದರು. ಒಮ್ಮೆ ಕೊರೋನಾದಿಂದ ಮುಕ್ತರಾದರೆ ಸಾಕು ಎಂದು ಬೇಡಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ