ಪುತ್ರಿಯ ಮೇಲೆ ರೇಪ್ ಎಸಗಿದ ತಂದೆಗೆ 1503 ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

ಭಾನುವಾರ, 23 ಅಕ್ಟೋಬರ್ 2016 (13:00 IST)
ಪುತ್ರಿಯ ಮೇಲೆ ಸ್ನೇಹಿತರೊಂದಿಗೆ ಅತ್ಯಾಚಾರವೆಸಗಿದ ಕಾಮುಕ ತಂದೆಗೆ ನ್ಯಾಯಾಲಯ 1503 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 
 
ಇದೊಂದು ತೀರ್ಪು ವಿಶ್ವದಲ್ಲಿಯೇ ಐತಿಹಾಸಿಕವಾಗಿದ್ದು, ಇಂತಹ ಕಾಮುಕರಿಗೆ ತಕ್ಕ ಪಾಠವಾಗಿದೆ. ಮುಂಬರುವ ಭವಿಷ್ಯದಲ್ಲಿ ಅಂತಹ ಕೃತ್ಯಗಳು ನಡೆಯಬಾರದು ಎನ್ನುವುದು ನ್ಯಾಯಾಲಯದ ಉದ್ದೇಶವಾಗಿದೆ ಎಂದು ತಿಳಿಸಿದೆ.
 
ಇಂತಹ ವ್ಯಕ್ತಿಗಳು ಸಮಾಜಕ್ಕೆ ಮಾರಕವಾಗಿದ್ದಾರೆ. ಮುಂಬರುವ ಯುವ ಪೀಳಿಗೆ ಕೂಡಾ ಇಂತಹ ವ್ಯಕ್ತಿಗಳ ನೆರಳಲ್ಲಿ ಬೆಳೆಯುವುದರಿಂದ ಸಮಾಜಕ್ಕೆ ಕಂಟಕ ಪ್ರಾಯರಾಗುತ್ತಾರೆ. ಇಂತಹ ಕಾಮುಕ ಜೈಲಿನಲ್ಲಿ ಕೊಳೆಯುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.
 
ಪುತ್ರಿಗೆ ಆಶ್ರಯ ಕೊಟ್ಟು ಕರ್ತವ್ಯ ನಿಭಾಯಿಸಬೇಕಾದ ತಂದೆಯೇ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ತಾನು ಹೇಯ ಕೃತ್ಯ ಎಸಗಿದ್ದಲ್ಲದೇ ತನ್ನ ಗೆಳೆಯರಿಗೆ ಕೂಡಾ ಪುತ್ರಿಯ ಮೇಲೆ ಅತ್ಯಾಚಾರವೆಸಗಲು ಅವಕಾಶ ಕೊಟ್ಟಿದ್ದಾನೆ ಎಂದು  ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.
 
ತಂದೆ ಮತ್ತು ಆತನ ಸ್ನೇಹಿತರ ಕಿರುಕುಳ ತಾಳದ ಪುತ್ರಿ ಆರೋಪಿ ತಂದೆ ಮತ್ತು ಆತನ ಸ್ನೇಹಿತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
 
ಆಕೆಯ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ತಂದೆ ಮತ್ತು ಆತನ ಗೆಳೆಯರನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದರು. ಇದೀಗ ನ್ಯಾಯಾಲಯ ಆರೋಪಿಗಳಿಗೆ 1503 ವರ್ಷಗಳ ಕಠಿಣ ಶಿಕ್ಷೆಯನ್ನು ನೀಡಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ