ಇಂಡೋನೇಷ್ಯಾದಲ್ಲಿಂದು ಪ್ರಬಲ ಭೂಕಂಪನವಾಗಿದೆ. ಇಂಡೋನೇಷ್ಯಾದ ಮೌಮೆರೆಯಿಂದ ಉತ್ತರಕ್ಕೆ 95 ಕಿಮೀ ದೂರದಲ್ಲಿ ಭೂಮಿ ನಡುಗಿದ್ದು,
ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.6ರಷ್ಟು ದಾಖಲಾಗಿದೆ.ಯುನೈಟೆಡ್ ಸ್ಟೇಟಸ್ ಇಂಡೋನೇಷ್ಯಾದ ಮೌಮೆರೆಯಿಂದ ಉತ್ತರಕ್ಕೆ 95 ಕಿಮೀ ದೂರದಲ್ಲಿಭೂವೈಜ್ಞಾನಿಕ ಸಮೀಕ್ಷೆ (
USGS) ತಿಳಿಸಿದೆ.
ಇನ್ನು ಇಂಡೋನೇಷ್ಯಾದ ಹವಾಮಾನ ಇಲಾಖೆ ಅಧಿಕಾರಿಗಳು ಸುಮಾರು 7.5 ರಷ್ಟು ತೀವ್ರತೆಯ ಭೂಕಂಪ ಆಗಿದ್ದಾಗಿ ಹೇಳಿದ್ದಾರೆ. ಪೂರ್ವ ನುಸಾ ತೆಂಗರಾ ಪ್ರದೇಶದಲ್ಲಿ ಭೂಕಂಪ ಅಪ್ಪಳಿಸಿದ್ದಾಗಿ ಮಾಹಿತಿ ನೀಡಿರುವ ಅವರು ಸುನಾಮಿ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹಾಗೇ, ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ, ಭೂಕಂಪವು ಭೂ ಮೇಲ್ಮೈಯಿಂದ 5 ಕಿಮೀ ಆಳದಲ್ಲಿ, 7.7ರಷ್ಟು ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ಹೇಳಿದೆ.