ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ !

ಭಾನುವಾರ, 5 ಡಿಸೆಂಬರ್ 2021 (10:53 IST)
ಜಕಾರ್ತ : ಜ್ವಾಲಾಮುಖಿ ಸ್ಫೋಟದಿಂದ 13 ಮಂದಿ ಮೃತಪಟ್ಟಿದ್ದರು, ಹತ್ತಾರು ಜನರು ಗಾಯಗೊಂಡಿರುವ ಘಟನೆ ಇಂಡೋನೇಷ್ಯಾದ ಜಾವಾ ಪ್ರಾಂತ್ಯದ ಮೌಂಟ್ ಸಿಮೇರುವಿನಲ್ಲಿ ನಡೆದಿದೆ.
ಜಾವಾ ದ್ವೀಪದ ಅತಿ ಎತ್ತರದ ಪರ್ವತವಾದ ಸಿಮೇರುವಿನಲ್ಲಿ ಜ್ವಾಲಾಮುಖಿ ಸ್ಫೋಟಗೊಂಡು ಹತ್ತಿರದ ಹಳ್ಳಿಗಳಲ್ಲಿ ಲಾವಾ ಹರಿದಿದೆ. ಪರಿಣಾಮವಾಗಿ ಬಹುತೇಕ ನಾಶವಾಗಿದ್ದು, ಹಲವರು ಮೃತಪಟ್ಟಿದ್ದಾರೆ. ಸ್ಥಳೀಯರು ಭಯಭೀತರಾಗಿ ಬೇರೆಡೆಗೆ ಸ್ಥಳಾಂತರರಾಗಿದ್ದಾರೆ. 
ಸಿಮೇರು ಸಮೀಪದ ಲುಮಾಜಾಂಗ್ ಕೆರೊಬೊಕನ್ ಗ್ರಾಮದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ 13 ಮಂದಿ ಮೃತಪಟ್ಟಿದ್ದು, ಅವರಲ್ಲಿ ಇಬ್ಬರನ್ನು ಗುರುತಿಸಲಾಗಿದೆ ಎಂದು ಅಧಿಕಾರಿ ಅಬ್ದುಲ್ ಮುಹಾರಿ ತಿಳಿಸಿದ್ದಾರೆ. ಇಬ್ಬರು ಗರ್ಭಿಣಿಯರು ಸೇರಿದಂತೆ 92 ಮಂದಿ ಗಾಯಗೊಂಡಿದ್ದಾರೆ. ಗ್ರಾಮದಲ್ಲಿ ನೆಲೆಸಿದ್ದ 902 ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ