ಯುಕಾಡರ್ ಸೇನಾ ವಿಮಾನವು ಅಮೆಜಾನ್ ಮಳೆಕಾಡಿನಲ್ಲಿ ಮಂಗಳವಾರ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 22 ಜನರು ಮೃತಪಟ್ಟಿದ್ದಾರೆಂದು ಯುಕಾಡೋರ್ ಅಧ್ಯಕ್ಷ ರಾಫೆಲ್ ಕೋರಿಯಾ ತಿಳಿಸಿದ್ದಾರೆ. ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕೋರಿಯಾ, ಇದೊಂದು ದುರಂತ ಎಂದು ಬಣ್ಣಿಸಿದ್ದಾರೆ.
19 ಪ್ಯಾರಾಟ್ರೂಪರ್‌ಗಳು, ಇಬ್ಬರು ಪೈಲಟ್‌ಗಳನ್ನು ಮತ್ತು ಒಬ್ಬ ಮೆಕಾನಿಕ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಪೆರು ಗಡಿಯ ಬಳಿಕ ಪಾಸ್ಟಾಜಾ ಪ್ರಾಂತ್ಯದಲ್ಲಿ ವಿಮಾನವು ಅಪಘಾತಕ್ಕೀಡಾಗಿದೆ. ವಿಮಾನವು ಪ್ಯಾರಾಚ್ಯೂಟಿಂಗ್ ಮಾಸ್ಟರ್ ಕ್ಲಾಸ್‌ಗೆ ಸೈನಿಕರನ್ನು ಒಯ್ಯುತ್ತಿದ್ದಾಗ ಅಪಘಾತ ಸಂಭವಿಸಿದೆ .