ಮಹತ್ವದ ಬದಲಾವಣೆ ಘೋಷಿಸಿದ ಎಲೋನ್ ಮಸ್ಕ್

ಭಾನುವಾರ, 2 ಜುಲೈ 2023 (12:55 IST)
ವಾಷಿಂಗ್ಟನ್ : ಆರಂಭದಿಂದಲೂ ಟ್ವಿಟ್ಟರ್ನಲ್ಲಿ ಒಂದಿಲ್ಲೊಂದು ಬದಲಾವಣೆಯನ್ನು ತರುತ್ತಿರುವ ಟ್ವಿಟ್ಟರ್ ಮುಖ್ಯಸ್ಥ ಎಲೋನ್ ಮಸ್ಕ್, ಒಂದು ದಿನಕ್ಕೆ ಟ್ವಿಟ್ಟರ್ನಲ್ಲಿ ಇಂತಿಷ್ಟೇ ಪೋಸ್ಟ್ಗಳನ್ನ ಓದಬಹುದು ಎಂದು ಮಿತಿ ವಿಧಿಸಿದ್ದರು. ಇದೀಗ ಮತ್ತೆ ಓದುವಿಕೆ ಮಿತಿಯನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ.
 
ಶನಿವಾರ ವಿಶ್ವದಾದ್ಯಂತ ಕೆಲಕಾಲ ಟ್ವಿಟ್ಟರ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಜನ ಅಸಮಾಧಾನ ಹೊರಹಾಕಿದ್ದರು. ಬಳಿಕ ಮಸ್ಕ್ ಬದಲಾವಣೆಯ ಅಸ್ತ್ರ ಹೂಡಿದ್ದರು.

ಅನಗತ್ಯ ಡೇಟಾ ಬಳಕೆ ಮಾಡೋದನ್ನ ತಪ್ಪಿಸುವುದು, ಕೆಲ ಪೋಸ್ಟ್ಗಳ  ಮೂಲಕ ಕೆರಳಿಸುವ ಯತ್ನ ಮಾಡುತ್ತಿರುವುದು ಸೇರಿದಂತೆ ಹಲವು ವಿಷಯಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಟ್ವಿಟ್ಟರ್ ಪ್ರತಿದಿನದ ಪೋಸ್ಟ್ ಓದಲು ಮಿತಿ ವಿಧಿಸಿತ್ತು. ಇದು ತಾತ್ಕಾಲಿಕ ಕ್ರಮವಾಗಿದೆ. ಮುಂದೆ ಟ್ವಿಟ್ಟರ್ ಬಳಕೆದಾರರ ಪ್ರತಿಕ್ರಿಯೆ ನೋಡಿಕೊಂಡು ಬದಲಾವಣೆ ತರುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು. 

ವೆರಿಫೈ ಆದ ಖಾತೆಗಳಿಗೆ ದಿನಕ್ಕೆ 6,000 ಪೋಸ್ಟ್ ಮಾತ್ರ ಓದಲು ಅವಕಾಶವಿತ್ತು. ವೆರಿಫೈ ಆಗದ ಖಾತೆಗಳಿಗೆ ದಿನಕ್ಕೆ 600 ಹಾಗೂ ವೆರಿಫೈ ಆಗದ ಹೊಸ ಖಾತೆಗಳ ಬಳಕೆದಾರರು ದಿನಕ್ಕೆ 300 ಪೋಸ್ಟ್ಗಳನ್ನು ಓದಲು ಮಿತಿ ಇರುತ್ತದೆ ಎಂದು ಶನಿವಾರ ಮಸ್ಕ್ ಹೇಳಿದ್ದರು.

ಈ ಕುರಿತು ಭಾನುವಾರ ಮತ್ತೊಂದು ಟ್ವೀಟ್ ಮಾಡಿ ಓದುವಿಕೆ ಮಿತಿಯಲ್ಲಿ ಕೊಂಚ ಮಾರ್ಪಾಡು ಮಾಡುವುದಾಗಿ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ