ಕೊಲಂಬಿಯಾದಲ್ಲಿ ಸ್ಫೋಟಕ ದಾಳಿ !
ಅಧ್ಯಕ್ಷ ಗುಸ್ಟಾವೋ ಪೆಟ್ರೋ ಅಧಿಕಾರ ವಹಿಸಿಕೊಂಡ ಬಳಿಕ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಪೆಟ್ರೋ, 8 ಪೊಲೀಸರ ಸಾವಿಗೆ ಕಾರಣವಾದ ಸ್ಫೋಟಕ ದಾಳಿಯನ್ನು ನಾನು ಬಲವಾಗಿ ತಿರಸ್ಕರಿಸುತ್ತೇನೆ ಎಂದು ಬರೆದಿದ್ದಾರೆ.
ಇದು ಪೊಲೀಸ್ ಭದ್ರತೆಯ ವಿರುದ್ಧದ ದಾಳಿಯಾಗಿದೆ. ಪೊಲೀಸರನ್ನು ಸ್ಫೋಟಕಗಳಿಂದ ಹಾಗೂ ಬಂದೂಕುಗಳಿಂದ ಕೊಲ್ಲಲಾಗಿದೆ ಎಂದು ಪ್ರಾದೇಶಿಕ ಪೊಲೀಸ್ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.