ಟ್ವೀಟ್ ಮೂಲಕ ರೈಲ್ವೆ ಇಲಾಖೆಯ ಮೇಲೆ ಜನರ ಆಕ್ರೋಶ
ರೈಲಿನಲ್ಲಿ ಬರುವ ಪಾರ್ಸೆಲ್‍ಗಳನ್ನು ಕೆಲಸಗಾರರು ಬೀಸಾಡುವ ವಿಡಿಯೋವೊಂದು ಇತ್ತೀಚೆಗಷ್ಟೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ವೀಡಿಯೋ ಕುರಿತಂತೆ ಈಶಾನ್ಯ ಫ್ರಾಂಟಿಯರ್ ರೈಲ್ವೆ ಸ್ಪಷ್ಟನೆ ನೀಡಿದೆ. ಗುವಾಹಟಿ ನಿಲ್ದಾಣದಲ್ಲಿ ರೈಲ್ವೆ ನಿಲ್ದಾಣಕ್ಕೆ ರೈಲಿನಲ್ಲಿ ಬಂದ ರಾಶಿಗಟ್ಟಲೆ ಪಾರ್ಸೆಲ್‍ಗಳನ್ನು ಕೆಳಗಿಳಿಸುವಾಗ ಕೆಲಸಗಾರರು ಬೇಜವಾಬ್ದಾರಿಯಿಂದ ಇಷ್ಟಬಂದಂತೆ ಬೀಸಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಟ್ವೀಟ್ ಮಾಡುವ ಮೂಲಕ ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನವದೆಹಲಿ ದಿಬ್ರುಗಢ ರಾಜಧಾನಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಬಂದ ಈ ಪಾರ್ಸೆಲ್‍ಗಳು ಅಮೆಜಾನ್, ಫ್ಲಿಪ್‍ಕಾರ್ಟ್ ಮುಂತಾದ ಎಲ್ಲಾ ಚಿಲ್ಲರೆ ವ್ಯಾಪಾರಿಗಳಿಂದ ಬಂದಿವೆ ಎಂದು ವೀಡಿಯೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು. ಇದರಿಂದಾಗಿ ಅನೇಕ ಬಾರಿ ಗ್ರಾಹಕರು ಮುರಿದು ಹೋಗಿರುವ ವಸ್ತುಗಳನ್ನು ಪಡೆದು, ತೊಂದರೆ ಪಡುತ್ತಾರೆ ಎಂದು ಕಿಡಿಕಾರಿದ್ದರು.