ಟೆಕ್ಸಾಸ್‌ನಲ್ಲಿ ಹಠಾತ್ ಪ್ರವಾಹದಿಂದ 50 ಮಂದಿ ಸಾವು: 850 ಮಂದಿಯ ರಕ್ಷಣೆ, 27 ವಿದ್ಯಾರ್ಥಿನಿಯರು ನಾಪತ್ತೆ

Sampriya

ಭಾನುವಾರ, 6 ಜುಲೈ 2025 (11:14 IST)
Texas flash flood, Guadalupe River, rescue operation
ವಾಷಿಂಗ್ಟನ್‌: ಅಮೆರಿಕದ ಟೆಕ್ಸಾಸ್‌ನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ 15 ಮಕ್ಕಳು ಸೇರಿ, 50 ಮಂದಿ ಸಾವಿಗೀಡಾಗಿದ್ದಾರೆ. 850ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಗ್ವಾಡಾಲುಪೆ ನದಿಯ ಬಳಿ ಆಯೋಜಿಸಿದ್ದ ಬೇಸಿಗೆ ಶಿಬಿರದಿಂದ 27 ವಿದ್ಯಾರ್ಥಿನಿಯರು ಕಣ್ಮರೆಯಾಗಿದ್ದಾರೆ. 

ತೀವ್ರ ಮಳೆಯಾಗಿದ್ದು, ಹಠಾತ್‌ ಪ್ರವಾಹ ಉಂಟಾಗಿದೆ. ಅತೀ ಕಡಿಮೆ ಅವಧಿಯಲ್ಲಿ 15 ಇಂಚುಗಳಷ್ಟು ಮಳೆಯಾಗಿದ್ದು, ನದಿಯ ನೀರು 29 ಅಡಿಗಳಿಗೆ ಏರಿದೆ. ರಕ್ಷಣಾ ತಂಡವು ಅತಂತ್ರರಾಗಿ ಸಿಲುಕಿರುವ ಜನರನ್ನು ಪತ್ತೆ ಮಾಡಲು ಯತ್ನಿಸುತ್ತಿದೆ. 500 ಸಿಬ್ಬಂದಿ ಮತ್ತು 14 ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕೆರ್ ಕೌಂಟಿ ಪ್ರದೇಶದಲ್ಲಿ ಪ್ರವಾಹ ಈಗ ಕಡಿಮೆಯಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹದ ಆತಂಕ ಇನ್ನೂ ಮನೆ ಮಾಡಿದ್ದು, ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲಾಗಿದೆ. ಹವಾಮಾನ ಇಲಾಖೆ ಈ ಪ್ರದೇಶದಲ್ಲಿ ವಾರ್ಷಿಕವಾಗಿ ಅರ್ಧದಷ್ಟು ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ನೀಡಿತ್ತು. ಇದರಿಂದ ಯಾವುದೇ ಮುಂಜಾಗ್ರತೆ ಇಲ್ಲದ ಪರಿಣಾಮ ಈ ಅವಘಡ ಸಂಭವಿಸಿದೆ.

ಹವಾಮಾನ ಇಲಾಖೆಯಲ್ಲಿ ಇತ್ತೀಚಿಗೆ ಸಿಬ್ಬಂದಿ ಕಡಿತದಿಂದ ನಿಖರ ಹವಾಮಾನ ಮುನ್ಸೂಚನೆ ನೀಡಲು ಸಾಧ್ಯವಾಗದೇ ಇದ್ದಿರಬಹುದು ಎಂದು ತಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ