ಫ್ಲೈಟ್‌ ಕ್ಯಾನ್ಸಲ್‌ : 10 ಲಕ್ಷ ಡಾಲರ್‌ ಬಂಪರ್‌ ಲಾಟರಿ!

ಶುಕ್ರವಾರ, 6 ಆಗಸ್ಟ್ 2021 (11:59 IST)
ನ್ಯೂಯಾರ್ಕ್ (.06):  ವಿಮಾನ ರದ್ದಾಗಿದ್ದರಿಂದ ಮತ್ತೊಂದು ವಿಮಾನಕ್ಕಾಗಿ ಕಾಯುತ್ತಾ ಕುಳಿತ ಮಹಿಳೆಯೊಬ್ಬರು ಸಮಯ ಕಳೆಯಲು ಲಾಟರಿ ಟಿಕೆಟ್‌ ತೆಗೆದುಕೊಂಡು ಬರೋಬ್ಬರಿ 10 ಲಕ್ಷ ಡಾಲರ್‌ ಜಾಕ್‌ಪಾಟ್‌ ಹೊಡೆದ ಅಚ್ಚರಿಯ ಘಟನೆ ಅಮೆರಿಕದಲ್ಲಿ ನಡೆದಿದೆ. 

ಏಂಜೆಲಾ ಕಾರಾವೆಲ್ಲಾ (51) ಎಂಬವರು ಹೋಗಬೇಕಿದ್ದ ವಿಮಾನ ಅನಿರೀಕ್ಷಿತವಾಗಿ ರದ್ದಾಗಿತ್ತು. ಮತ್ತೊಂದು ವಿಮಾನಕ್ಕಾಗಿ ಕಾದು ಕುಳಿತ ಅವರು ಟೈಮ್‌ಪಾಸ್‌ಗೆಂದು ಸ್ಕ್ರಾಚ್‌ ಆಫ್‌ ಟಿಕೆಟ್‌ ಖರೀದಿಸಿದ್ದರು. 
ಈ ಪೈಕಿ ಒಂದು ಟಿಕೆಟ್‌ನಲ್ಲಿ ಬರೋಬ್ಬರಿ 10 ಲಕ್ಷ ಡಾಲರ್‌ ಬಹುಮಾನ ಗೆದ್ದು, ಬಂಪರ್‌ ಹೊಡೆದಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ