ಆಗಸ್ಟ್ 13ರಿಂದ ಬೆಳಗಾವಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಆರಂಭ!

ಬುಧವಾರ, 28 ಜುಲೈ 2021 (08:38 IST)
ನವದೆಹಲಿ(ಜು.28): ದಶಕಗಳಿಂದ ಬೆಳಗಾವಿ ಜನರು ದೆಹಲಿಗೆ ನೇರ ವಿಮಾನ ಸೇವೆ ಕನಸು ಕಾಣುತ್ತಿದ್ದರು. ಇದೀಗ ಗಡಿನಾಡ ಕನ್ನಡಿಗರ ಕನಸು ನನಸಾಗಿದೆ. ಬೆಳಗಾವಿಯಿಂದ ದೆಹೆಲಿಗೆ ನೇರ ವಿಮಾನಯಾನ ಸೇವೆ ಆರಂಭಗೊಳ್ಳುತ್ತಿದೆ. ಇದೇ ಆಗಸ್ಟ್ 13 ರಿಂದ ಸ್ಪೈಸ್ಜೆಟ್ ವಿಮಾನ ಸೇವೆ ಆರಂಭಗೊಳ್ಳುತ್ತಿದೆ.

•ಬೆಳಗಾವಿ ಜನರ ದಶಕದ ಕನಸು ನನಸು, ವಿಮಾನಯಾನ ಆರಂಭ
•ಅ.13ರಿಂದ ಬೆಳಗಾವಿಯಿಂದ ದೆಹಲಿಗೆ ನೇರ ವಿಮಾನಯಾನ ಸೇವೆ
•ವಿಮಾನ ಸೇವೆ ಘೋಷಿಸಿದ ಸ್ಪೈಸ್ಜೆಟ್

ಬೆಳಗಾವಿ ವಿಮಾನ ನಿಲ್ದಾಣದಿಂದ ನೇರ ವಿಮಾನಯಾನಕ್ಕೆ ಅಲ್ಲಿನ ಸಂಸದರು, ಶಾಸಕರು, ಮಂತ್ರಿಗಳು ಸೇರಿದಂತೆ ಉದ್ಯಮಿಗಳು, ನಾಗರೀಕರು ಬೇಡಿಕೆ ಇಟ್ಟಿದ್ದರು.  ವ್ಯಾಪಾರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ವಾಯುಪಡೆ, MLIRC,  AEQUS ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಸಾಮ್ಯದ ಸಂಸ್ಥೆಗಳು ಬೆಳವಾಗಿಯಲ್ಲಿದೆ. ಹೀಗಾಗಿ ದೆಹಲಿಗೆ ನೆರ ವಿಮಾನದ ಅವಶ್ಯಕತೆ ಹೆಚ್ಚಾಗಿತ್ತು.

ಬೇಡಿಕೆಗೆ ಸ್ಪಂದಿಸಿದ ಸ್ಪೈಸ್ಜೆಟ್ ಇದೀಗ, ಸೋಮವಾರ ಹಾಗೂ ಶುಕ್ರವಾರ  ವಾರದಲ್ಲಿ ಎರಡು ದಿನ ಬೆಳಗಾವಿಯಿಂದ ನೇರವಾಗಿ ದೆಹಲಿಗೆ ವಿಮಾನ ಸೇವೆ ಆರಂಭಿಸುತ್ತಿದೆ.  149 ಪ್ರಯಾಣಿಕರನ್ನು ಸಾಗಿಸಬಲ್ಲ ಸಾಮರ್ಥ್ಯದ ಬೋಯಿಂಗ್ 737 ವಿಮಾನ, ಬೆಳವಾಗಿಯಿಂದ ದೆಹಲಿಗೆ ಹಾರಾಟ ನಡೆಸಲಿದೆ.
ದೆಹಲಿಯಿಂದ ಬೋಯಿಂಗ್ 737 ಸ್ಪೈಸ್ಜೆಟ್ ವಿಮಾನ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಂಜೆ 4.35ಕ್ಕೆ ಆಗಮಿಸಲಿದೆ. ಇನ್ನು ಸಂಜೆ 5.05ಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದ ದೆಹಲಿಗೆ ಹಾರಲಿದೆ.
ಸದ್ಯ ಬೆಳವಾಗಿ ವಿಮಾನ ನಿಲ್ದಾಣದಿಂದ ದೇಶದ 12 ಪ್ರಮುಖ ನಗರಗಳಿಗೆ ವಿಮಾನ ಸೇವೆ ಲಭ್ಯವಿದೆ. ಬೆಂಗಳೂು, ಮೈಸೂರು, ಕಡಪಾ, ತಿರುಪತಿ, ಮುಂಬೈ, ಪುಣೆ, ಅಹಮ್ಮದಾಬಾದ್, ನಾಸಿಕ್, ಹೈದರಾಬಾದ್, ಇಂದೋರ್, ಸೂರತ್ ಹಾಗೂ ಜೋಧಪುರಕ್ಕೆ ವಿಮಾನ ಸೇವೆ ಲಭ್ಯವಿದೆ. ಇದೀಗ ದೆಹಲಿ ಕೂಡ ಸೇರಿಕೊಂಡಿದೆ. ಅಲೈಯನ್ಸ್ ಏರ್, ಸ್ಪೈಸ್ ಜೆಟ್, ಸ್ಟಾರ್ ಏರ್, ಇಂಡಿಗೊ ಮತ್ತು ಟ್ರೂಜೆಟ್ ವಿಮಾನ ಸೇವೆ ನೀಡುತ್ತಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ