ರೆಡ್ ಲೈಟ್ ಸಿಗ್ನಲ್ ಗೆ ರಸ್ತೆ ಮೇಲೆ ಲ್ಯಾಂಡ್ ಆದ ವಿಮಾನ

ಸೋಮವಾರ, 5 ಆಗಸ್ಟ್ 2019 (09:08 IST)
ವಾಷಿಂಗ್ಟನ್ : ರಾಜ್ಯ ಹೆದ್ದಾರಿಯ ರೆಡ್ ಲೈಟ್ ಸಿಗ್ನಲ್ ಗೆ ಸಣ್ಣ ವಿಮಾನವೊಂದು ರೋಡ್ ಮೆಲಿಯೇ ಲ್ಯಾಂಡ್ ಆದ ಘಟನೆ ವಾಷಿಂಗ್ಟನ್ ನಲ್ಲಿ ನಡೆದಿದೆ.ವಿಮಾನವನ್ನು ಹಿಂಬಾಲಿಸಿದ  ಸ್ಟೇಟ್ ಟ್ರೂಪರ್ ಕ್ಲಿಂಟ್ ಥಾಂಪ್ಸನ್ ಎಂಬುವವರು ತಮ್ಮ  ಡ್ಯಾಶ್ ಬೋರ್ಡ್ ನ ಕ್ಯಾಮೆರಾದಲ್ಲಿ ಈ ಭಯಾನಕ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ವಿಮಾನ ರಿಮೋಟ್ ಕಂಟ್ರೋಲ್ ನಿಂದ ನಿಯಂತ್ರಣ ಮಾಡುತ್ತಿದೆ ಎಂದು ಅವರು ಮೊದಲು ಭಾವಿಸಿದ್ದರು. ಆದರೆ, ವಿಮಾನ ತುರ್ತಾಗಿ ಭೂಸ್ಪರ್ಶ ಮಾಡುತ್ತಿದ್ದುದನ್ನು ಗಮನಿಸಿ, ಪೈಲಟ್ ತುರ್ತಾಗಿ ಭೂಸ್ಪರ್ಶ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಂಡರು.


ವಿಮಾನ ರೆಡ್ ಲೈಟ್ ಗೆ ರಸ್ತೆಯಲ್ಲಿ ಲ್ಯಾಂಡ್ ಆಗುತ್ತಿದ್ದ ಹಾಗೇ ಅಲ್ಲಿಗೆ ಬಂದ ಪೊಲೀಸರು ಪೈಲಟ್ ನ್ನು ವಿಚಾರಿಸಿದಾಗ ವಿಮಾನದ ಇಂಧನ ವ್ಯವಸ್ಥೆಯು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರಿಂದ ಲ್ಯಾಂಡಿಂಗ್ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ