ವಿಮಾನ ನಿಲ್ದಾಣದಲ್ಲಿ ಬ್ಯಾಗ್ ವೈಟ್ ಸರಿದೂಗಿಸಲು ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?

ಬುಧವಾರ, 10 ಜುಲೈ 2019 (08:55 IST)
ಫ್ರಾನ್ಸ್ : ಫ್ರಾನ್ಸ್ ನ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಬ್ಯಾಗೇಜ್ ವೈಟ್ ಸರಿದೂಗಿಸಿ ಹೆಚ್ಚುವರಿ ಹಣ ನೀಡುವುದನ್ನು ತಪ್ಪಿಸಲು ಮಾಡಿದ ಉಪಾಯವೆನೆಂದು ತಿಳಿದರೆ ನೀವು ಶಾಕ್ ಆಗ್ತೀರಾ.




ಹೌದು. ವಿಮಾನ ನಿಲ್ದಾಣದಲ್ಲಿ ಸಹಜವಾಗಿ ಕಾಡುವ ಸಮಸ್ಯೆಯೆಂದರೆ ಅದು ಬ್ಯಾಗ್ ವೈಟ್ ಸಮಸ್ಯೆ. ಬ್ಯಾಗ್ ವೈಟ್ ಹೆಚ್ಚಾದರೆ ಹೆಚ್ಚುವರಿ ಹಣ ನೀಡಬೇಕಾಗುತ್ತದೆ. ಅದನ್ನು ತಪ್ಪಿಸಲು 46 ವರ್ಷದ ಇರ್ವಿನ್ ಎನ್ನುವ ವ್ಯಕ್ತಿ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗುವಾಗ ಬರೋಬ್ಬರಿ 15 ಟೀ ಶರ್ಟ್ ಹಾಕಿಕೊಂಡು ಬ್ಯಾಗ್ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾನೆ.


ಈತ ವಿಮಾನ ನಿಲ್ದಾಣದ ಅಧಿಕಾರಗಳ ಕೈಗೆ ಸಿಕ್ಕಿಬಿದ್ದಿದ್ದು, ಇತನ ಘನಕಾರ್ಯ ನೋಡಿ ಅಧಿಕಾರಿಗಳು ನಗುತ್ತಿದ್ದಾರೆ. ಈ ವಿಡಿಯೋವನ್ನು ಇರ್ವಿನ್ ಮಗ ಚಿತ್ರೀಕರಿಸಿದ್ದು ಇದು ಈಗ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ