ಶ್ರೀಲಂಕಾ : ಶ್ರೀಲಂಕಾದವರು ದೇವರೆಂದು ಪೂಜಿಸುವ ರಾವಣನನ್ನು ಇದೀಗ ಅಲ್ಲಿನ ಸರ್ಕಾರ ವಿಶ್ವದ ಮೊದಲ ವಿಮಾನ ಚಾಲಕ ಎಂದು ಘೋಷಣೆ ಮಾಡಿ, ಈ ಬಗ್ಗೆ ಸಂಶೋಧನೆ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಶ್ರೀಲಂಕಾದ ಅತಿ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಕಟುನಾಯಕೆಯಲ್ಲಿ ಸಮ್ಮೇಳನವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು ಭಾಗವಹಿಸಿದ್ದರು.
ಈ ವೇಳೆ ಶ್ರೀಲಂಕಾ ನಾಗರಿಕ ವಿಮಾನಯಾನ ಸಂಸ್ಥೆ ಉಪಮುಖ್ಯಸ್ಥ ಶಶಿ ದಾನತುಂಗೆ, 'ರಾವಣ ಪ್ರತಿಭಾನ್ವಿತ ವ್ಯಕ್ತಿ. ಆಗಸದಲ್ಲಿ ಹಾರಾಟ ನಡೆಸಿದ ಮೊದಲಿಗ ರಾವಣ. ಆತ ಒಂದು ರೀತಿಯಲ್ಲಿ ವಿಮಾನ ಚಾಲಕನಿದ್ದಂತೆ. ಇದು ಪುರಾಣವಲ್ಲ, ನಿಜಾಂಶ. ಈ ಬಗ್ಗೆ ವಿಸ್ತ್ರತ ಸಂಶೋಧನೆ ನಡೆಯಬೇಕಿದೆ. ಮುಂದಿನ ಐದು ವರ್ಷಗಳಲ್ಲಿ ನಾವು ಇದನ್ನು ಸಾಬೀತು ಮಾಡುತ್ತೇವೆ,' ಎಂದು ಹೇಳಿದ್ದಾರೆ ಎನ್ನಲಾಗಿದೆ.