ಯೆಮನ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷ ಪ್ರಿಯ ಕೊನೆಗೂ ಪಾರಾಗಿದ್ದಾರೆ. ಅವರ ಮರಣ ದಂಡನೆ ರದ್ದಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಧರ್ಮಗುರು ಡಾ ಕೆಎ ಪೌಲ್ ಹೇಳಿದ್ದಾರೆ.
ಕೇರಳದ ಪಾಲಕ್ಕಾಡ್ ಮೂಲದ ನಿಮಿಷ ಪ್ರಿಯ 2017 ರಿಂದ ಯೆಮನ್ ನಲ್ಲಿ ಜೈಲು ವಾಸಿಯಾಗಿದ್ದರು. ಅಲ್ಲಿನ ಸ್ಥಳೀಯ ನಿವಾಸಿ ಮೆಹ್ದಿಗೆ ಓವರ್ ಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ಪ್ರಕರಣದಲ್ಲಿ ಆಕೆಯ ಬಂಧನವಾಗಿತ್ತು. ಮೊನ್ನೆಯಷ್ಟೇ ಆಕೆಗೆ ಗಲ್ಲು ಶಿಕ್ಷೆ ನಿಗದಿಯಾಗಿತ್ತು.
ಆದರೆ ಕೊನೆಯ ಕ್ಷಣದಲ್ಲಿ ಸೂಫಿ ಸಂತರ ಮಧ್ಯಸ್ಥಿಕೆಯಲ್ಲಿ ಯೆಮನ್ ಸರ್ಕಾರದ ಜೊತೆ ಮಾತುಕತೆ ನಡೆಸಿ ಮರಣದಂಡನೆ ಮುಂದೂಡಲಾಗಿತ್ತು. ಇದೀಗ ಸತತ ಪ್ರಯತ್ನಗಳ ನಂತರ ಆಕೆಗೆ ಕ್ಷಮೆ ನೀಡಲು ನಿರ್ಧರಿಸಲಾಗಿದೆ ಎಂದು ಪೌಲ್ ಹೇಳಿದ್ದಾರೆ.
ಸದ್ಯಕ್ಕೆ ನಿಮಿಷ ಪ್ರಿಯ ಯೆಮನ್ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ. ಕಳೆದ 10 ದಿನಗಳಿಂದ ಹಗಲಿರುಳು ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ನಿಮಿಷ ಪ್ರಿಯಾ ಅವರ ಗಲ್ಲು ಶಿಕ್ಷೆ ರದ್ದಾಗಿದೆ. ಇದನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ನಾಯಕರಿಗೆ ಧನ್ಯವಾದ. ದೇವರ ದಯೆಯಿಂದ ಆಕೆಯನ್ನು ಬಿಡುಗಡೆ ಮಾಡಿ ಭಾರತಕ್ಕೆ ಕರೆದೊಯ್ಯಲಾಗುವುದು. ನಿಮ್ಮ ರಾಜತಾಂತ್ರಿಕರನ್ನು ಕಳುಹಿಸಿದ್ದಕ್ಕೆ ಮತ್ತು ನಿಮಿಷ ಪ್ರಿಯಾರನ್ನು ವೃತ್ತಿಪರವಾಗಿ ಸುರಕ್ಷಿತವಾಗಿ ಕರೆದೊಯ್ಯಲು ತಯಾರಿ ನಡೆಸಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದಗಳು ಎಂದು ಕೆಎ ಪೌಲ್ ಟ್ವೀಟ್ ಮಾಡಿದ್ದಾರೆ.