ಸಾವಿರ ಬಸ್ಕಿ ಹೊಡೆದು ಜೀವಕ್ಕೆ ಕುತ್ತು ತಂದುಕೊಂಡ ಹುಡುಗಿಯರು!

ಶನಿವಾರ, 3 ಆಗಸ್ಟ್ 2019 (06:55 IST)
ಚೀನಾ : ಬಸ್ಕಿ ಹೊಡೆಯುವುದರಿಂದ  ಸ್ನಾಯುಗಳ ಬಲ ಹೆಚ್ಚಾಗುವುದು ಸಹಜ. ಆದರೆ ಯಾವುದೇ ಕೆಲಸವನ್ನು ಅತಿಯಾಗಿ ಮಾಡಿದರೆ ಅದರಿಂದ ಕೆಟ್ಟದಾಗುತ್ತದೆ ಎಂಬುದಕ್ಕೆ ಚೀನಾದ ಈ ಹುಡುಗಿಯರಿಬ್ಬರು ಒಂದು ಪ್ರಮುಖ ಸಾಕ್ಷಿ.



ಹೌದು. ಚೀನಾದ ಹದಿಹರೆಯದ ಹುಡುಗಿಯರಿಬ್ಬರು ವಿಡಿಯೋ ಕರೆಯೊಂದರ ಮೂಲಕ ಸಾವಿರ ಬಸ್ಕಿ ಹೊಡೆಯುವ ಚಾಲೆಂಜನ್ನು ಸ್ವೀಕರಿಸಿ ಹೇಗಾದರ ಮಾಡಿ ಸಾವಿರ ಬಸ್ಕಿ ಹೊಡೆದು ಚಾಲೆಂಜಿನಲ್ಲಿ ಯಶಸ್ವಿಯಾದರು. ಆದರೆ ಕೆಲವು ದಿನಗಳ ನಂತರ ಅವರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದ ಕಾರಣ ಇದೀಗ  ಅವರು ಆಸ್ಪತ್ರೆಯ ಸೇರಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. 

 

ಅವರು ಗಂಭೀರ ಸಾಯ್ನು ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ವೈದ್ಯರು ಪತ್ತೆಹಚ್ಚಿದ್ದಾರೆ. ಇವರ ಸ್ನಾಯುಗಳು ಒಡೆದ ಕಾರಣ ಇವರಲ್ಲಿ ಮಯೋಗ್ಲೋಬಿನ್ ಎಂಬ ಒಂದು ಪ್ರೋಟೀನ್ ಹೆಚ್ಚಾಗಿ ಉತ್ಪತ್ತಿಯಾಗಿದ್ದು, ಇದರಿಂದ ಮೂತ್ರ ಕಂದು ಬಣ್ಣಕ್ಕೆ ತಿರುಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗೇ ಅವರ ಮಯೋಗ್ಲೋಬಿನ್ ಮಟ್ಟವು ಸಾಮಾನ್ಯ ಸ್ಥಿತಿಗೆ ಬರುವವರೆಗೆ ವೈದ್ಯರಿಂದ ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ