ತಾಂತ್ರಿಕ ದೋಷದಿಂದ ಕೈಕೊಟ್ಟ ಫೇಸ್‌ ಫಿಲ್ಟರ್‌; ಬಯಲಾಯ್ತು ವ್ಲಾಗರ್‌ ಅಸಲಿ ಮುಖ

ಶುಕ್ರವಾರ, 2 ಆಗಸ್ಟ್ 2019 (09:34 IST)
ಚೀನಾ : 'ಯುವರ್‌ ಹೈನೆಸ್‌ ಕಿಯಾವೋ ಬಿಲು' ಎಂದು ಕರೆದುಕೊಳ್ಳುವ ಚೀನಾದ ಪ್ರಖ್ಯಾತ ವ್ಲಾಗರ್‌, ಲೈವ್ ಕಾರ್ಯಕ್ರಮದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಆಕೆಯ ನಕಲಿ ಮುಖವಾಡ ಕಳಚಿಬಿದ್ದಿದೆ.
ಸಿಹಿಯಾದ ಧ್ವನಿಯ ಮೂಲಕ ಹೆಸರುವಾಸಿಯಾದ ಮಧ್ಯ ವಯಸ್ಸಿನ ಈ ಮಹಿಳೆ  ಫೇಸ್‌ ಫಿಲ್ಟರ್‌ ಮೂಲಕ ತನ್ನನ್ನು ಚಿಕ್ಕ ಹುಡುಗಿಯಂದು ಬಿಂಬಿಸಿಕೊಂಡಿದ್ದಳು. ಚೀನಾದ ಜನಪ್ರಿಯ ಪ್ರಸಾರ ವೇದಿಕೆಯಾದ ಡೌಯುನಲ್ಲಿ ಆಕೆ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್‌ ಗಳನ್ನು ಹೊಂದಿದ್ದಳು. ಅಷ್ಟೇ ಅಲ್ಲದೇ  ಆಕೆಯನ್ನು 'ಮುದ್ದಾದ ದೇವತೆ' ಎಂದು ಸಹ ಅಭಿಮಾನಿಗಳು ಆರಾಧಿಸಿ ಆಕೆಯ ಕಾರ್ಯಕ್ರಮಕ್ಕೆ 10ಲಕ್ಷಕ್ಕೂ ಹೆಚ್ಚು ದೇಣಿಗೆಗಳನ್ನೂ ಕಳುಹಿಸುತ್ತಿದ್ದರು.


ಫಿಲ್ಟರ್‌ ತೆರೆದು ಮುಖ ತೋರಲು ಕೋರಿದ ತನ್ನ ಅಭಿಮಾನಿಗಳ ಕೋರಿಕೆಯನ್ನು ಈಕೆ ನಿರಾಕರಿಸುತ್ತಾ ಬಂದಿದ್ದಳು. ಆದರೆ ಅಧಿವೇಶನವೊಂದರಲ್ಲಿ ತಾಂತ್ರಿಕ ದೋಷದಿಂದಾಗಿ  ಫಿಲ್ಟರ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ ಪರಿಣಾಮ ಆಕೆಯ ನಿಜವಾದ ಮುಖವು ಬಹಿರಂಗವಾಗಿದೆ. ಇದರಿಂದ ಆಕೆಯ ಫಾಲೋವರ್ಸ್ ಸಂಖ್ಯೆ ಕೂಡ ಕಡಿಮೆಯಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ