ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು ಬಂದ್‌!

ಶನಿವಾರ, 21 ಮೇ 2022 (11:24 IST)
ಕೊಲಂಬೋ : ತೀವ್ರ ಸಂಕಷ್ಟದಲ್ಲಿರುವ ಶ್ರೀಲಂಕಾದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.

ಮುಖ್ಯವಾಗಿ ಇಂಧನ ಕೊರತೆ ಆ ದೇಶವನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ. ಪೆಟ್ರೋಲ್ ಖಾಲಿಯಾದ ಪರಿಣಾಮ ದ್ವೀಪ ರಾಷ್ಟ್ರದಲ್ಲಿ ಇದೀಗ ಶಾಲೆ ಕಾಲೇಜು ಬಂದ್ ಆಗಿದೆ.

ತುರ್ತು ಸೇವೆಗಳ ಕಚೇರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗೆ ರಜೆ ನೀಡಲಾಗಿದೆ. ಈ ಪರಿಸ್ಥಿತಿ ಎಷ್ಟು ದಿನ ಮುಂದುವರೆಯಲಿದೆ ಎಂಬುದು ಗೊತ್ತಿಲ್ಲ.

ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ ತನ್ನ 70 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಲಕಟ್ಟಲು ಆಗದೇ ಕೈ ಎತ್ತಿದೆ. 78 ಮಿಲಿಯನ್ ಡಾಲರ್ ಸಾಲಪಾವತಿಸಲು ನೀಡಲಾಗಿದ್ದ ಗ್ರೇಸ್ ಅವಧಿ ಶುಕ್ರವಾರಕ್ಕೆ ಕೊನೆಯಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ