ಕೊಲಂಬೋ : ಸಾಲದ ಸುಳಿಗೆ ಸಿಲುಕಿ ನಲುಗಿರುವ ಶ್ರೀಲಂಕಾ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟನ್ನು ನಿಭಾಯಿಸಲು ಹೆಣಗಾಡುತ್ತಿದೆ.
ಈ ಯೋಜನೆಯ ಭಾಗವಾಗಿ ದ್ವೀಪ ರಾಷ್ಟ್ರ ತನ್ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಶ್ರೀಲಂಕನ್ ಏರ್ಲೈನ್ಸ್ ಅನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ.
ಶ್ರೀಲಂಕಾದ ಹೊಸದಾಗಿ ನೇಮಕಗೊಂಡ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಶ್ರೀಲಂಕನ್ ಏರ್ಲೈನ್ಸ್ ಅನ್ನು ಖಾಸಗೀಕರಣಗೊಳಿಸಲು ಮುಂದಾಗಿದ್ದಾರೆ. ಈ ಮೂಲಕ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ.
1948 ರಲ್ಲಿ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆದ ಬಳಿಕ ಶ್ರೀಲಂಕಾ ಇದೇ ಮೊದಲ ಬಾರಿಗೆ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಷ್ಟದಲ್ಲಿರುವ ಶ್ರೀಲಂಕಾದ ಏರ್ಲೈನ್ಸ್ ಅನ್ನು ಖಾಸಗೀಕರಣಗೊಳಿಸುವ ಬಗ್ಗೆ ವಿಕ್ರಮಸಿಂಘೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದರು.
ಶ್ರೀಲಂಕನ್ ಏರ್ಲೈನ್ಸ್ನ ವ್ಯವಸ್ಥಾಪಕ ಷೇರುದಾರ ಸ್ಥಾನದಿಂದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆಯನ್ನು ತೆಗೆದುಹಾಕಿದ ಬಳಿಕ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಿತು. 2021 ಮಾರ್ಚ್ ಹೊತ್ತಿಗೆ ಅದರ ಒಟ್ಟು ನಷ್ಟ 372 ಶತಕೋಟಿ ರೂ. ಆಗಿತ್ತು ಎಂದು ಶ್ರೀಲಂಕಾ ಪ್ರಧಾನಿ ತಿಳಿಸಿದ್ದಾರೆ.