ಆಸ್ಟ್ರೇಲಿಯಾದಲ್ಲಿ ಮತದಾನ ಮಾಡದವರಿಗೆ ಭಾರೀ ದಂಡ

ಸೋಮವಾರ, 20 ಮೇ 2019 (07:09 IST)
ಆಸ್ಟ್ರೇಲಿಯಾ : ಆಸ್ಟ್ರೇಲಿಯಾದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ.



ಹೌದು. ಆಸ್ಟ್ರೇಲಿಯಾದಲ್ಲಿ ಈ ಬಾರಿ ಮತದಾನದ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮಹತ್ವದ ಕಾರಣವಿಲ್ಲದೆ ಮತದಾನದಿಂದ ದೂರ ಉಳಿದ ನಾಗರಿಕರಿಗೆ ದಂಡ ವಿಧಿಸಲಾಗುತ್ತದೆ ಎಂದು ತೀರ್ಮಾನಿಸಲಾಗಿದೆ. ಮೊದಲ ಬಾರಿ ವೋಟ್ ಹಾಕದ ಅಪರಾಧಕ್ಕೆ 20 ಆಸ್ಟ್ರೇಲಿಯನ್ ಡಾಲರ್(965 ರೂ.) ಕಳೆದ ಬಾರಿಯೂ ವೋಟ್ ಮಾಡದೆ ಈ ಬಾರಿಯೂ ಅದೇ ತಪ್ಪನ್ನು ಪುನರಾವರ್ತಿಸಿದ್ದರೆ 50 ಆಸ್ಟ್ರೇಲಿಯನ್ ಡಾಲರ್ (2413 ರೂ.) ದಂಡ ತೆರಬೇಕು. ಈ ವಿಚಾರವನ್ನು  ಪಶ್ಚಿಮ ಆಸ್ಟ್ರೇಲಿಯಾ ಚುನಾವಣಾ ಆಯೋಗ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.


ಮತದಾನ ಮಾಡದ ನಾಗರಿಕರಿಗೆ ಆಯೋಗ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುತ್ತದೆ. ಅದಕ್ಕೆ ಸರಿಯಾದ ಕಾರಣ ನೀಡದಲ್ಲಿ ಮತದಾರನಿಗೆ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಉತ್ತರಿಸದೇ ಇದ್ದಲ್ಲಿ ಆತನಿಗಿರುವ ಸೌಲಭ್ಯಗಳಾದ ಡ್ರೈವಿಂಗ್ ಲೈಸೆನ್ಸ್, ಆಸ್ತಿ ಮುಟ್ಟುಗೋಲು ಮಾಡಬಹುದು ಎಂದು ಆಯೋಗ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ