ಬೈ ಎಲೆಕ್ಷನ್ ನಲ್ಲಿ ಯುವಕರಿಗೆ ಪ್ರೇರಣೆಯಾದ ವಯೋವೃದ್ಧೆ

ಭಾನುವಾರ, 19 ಮೇ 2019 (13:35 IST)
ಕುಂದಗೋಳ ವಿಧಾನಸಭೆ ಉಪಚುನಾವಣೆ ಹಿನ್ನಲೆಯಲ್ಲಿ ವಯೋವೃದ್ದರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಿ ಯುವಕರಿಗೆ ಸ್ಪೂರ್ತಿಯಾದರು.

ಕುಂದಗೋಳ ತಾಲೂಕಿನ ಅದರಗುಂಚಿ ಗ್ರಾಮದ ಹುಸನಮ್ಮ ಸುಲೆಮಾನ (95) ವಿಕಲಚೇತನ ಮಹಿಳೆ ಫಕೀರಮ್ಮ ಎಂಬುವವರು ವ್ಹೀಲ್ ಚೇರ ಮೇಲೆ ಆಗಮಿಸಿ ಮತದಾನ ಮಾಡಿದರು.

ಅದರಗುಂಚಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ಮತ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಯುವಕರಿಗೆ ಪ್ರೇರಣೆಯಾದರು.

ತಮ್ಮ ಇಳಿಯವಯಸ್ಸಿನಲ್ಲಿಯು ವೀಲ್ ಚೇರ್ ಸಹಾಯದಿಂದ ಮತದಾನ ಮಾಡಿದರು. ಯುವಕರೇ ಮತದಾನ ಮಾಡಲು ನಿಷ್ಕಾಳಜಿ ತೋರುತ್ತಿರುವವರ ಮಧ್ಯೆ  ವೃದ್ದರು ತಮ್ಮ ಹಕ್ಕು ಚಲಾವಣೆ  ಮಾಡಿ ಯುವಕರಿಗೆ ಮಾದರಿಯಾದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ