ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕುಲಭೂಷಣ್ ಜಾಧವ್ ಪರ ವಕೀಲ ಹರೀಶ್ ಸಾಳ್ವೆ ಕೇವಲ ಒಂದು ರೂ.ಸಂಭಾವನೆ ಪಡೆದು ವಾದ ಮಂಡಿಸಿದ್ದಾರೆ. ದೇಶಕ್ಕಾಗಿ ವಾದ ಮಾಡುತ್ತಿರುವುದಾಗಿ ಸಾಳ್ವೆ ತಿಳಿಸಿದ್ದಾರೆ.
ಭಾರತದ ಪರ ವಾದ ಮಂಡಿಸಿದ ಸಾಳ್ವೆ, ಐಸಿಜೆ ತೀರ್ಪು ತುಂಬಾನೆ ಸಂತಸ ತಂದಿದೆ. ಇದೊಂದು ಕಷ್ಟಕರವಾದ ಪ್ರಕರಣವಾಗಿತ್ತು. ಪಾಕಿಸ್ತಾನದ ಬೋಗಸ್ ವಾದವನ್ನು ಅಂತಾರಾಷ್ಟ್ರೀಯ ಕೋರ್ಟ್ ತಿರಸ್ಕರಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಕೋರ್ಟ್ ತೀರ್ಪಿನಿಂದ ಜಾಧವ್ ಕುಟುಂಬ ಮತ್ತು ಭಾರತಕ್ಕೆ ದೊಡ್ಡ ರಿಲೀಫ್ ದೊರೆತಂತಾಗಿದೆ ಎಂದು ಭಾರತದ ಪರ ವಕೀಲ ಹರೀಶ್ ಸಾಳ್ವೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.