ತೈಲ ಆಮದಿಗೆ ಮಾತ್ರ ನಿರ್ಬಂಧ!
ಆದರೆ ಯುರೋನಿಯಂ ಖರೀದಿ ನಿಷೇಧ ಹೇರದೆ ಇರುವ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.
ಅಮೆರಿಕ ಅಣು ಸ್ಥಾವರಗಳಿಗೆ ಯುರೋನಿಯಂ ಅಗತ್ಯವಿದೆ. ರಷ್ಯಾ ಹಾಗೂ ಅದರ ಮಿತ್ರರಾಷ್ಟ್ರಗಳಾದ ಕಝಕಿಸ್ತಾನ ಹಾಗೂ ಉಜ್ಬೇಕಿಸ್ತಾನದಲ್ಲಿ ಅತೀ ಹೆಚ್ಚು ಯುರೇನಿಯಂ ಸಿಗುತ್ತಿದ್ದು, ಅಮೆರಿಕ ಕೂಡಾ ಈ ದೇಶಗಳಿಂದಲೇ ಯುರೇನಿಯಂ ಅನ್ನು ಆಮದು ಮಾಡಿಕೊಳ್ಳುತ್ತದೆ.
ಅಮೆರಿಕ ಅಧ್ಯಕ್ಷ ತೈಲ ನಿಷೇಧವನ್ನು ಘೋಷಿಸಿದ ಬಳಿಕ ಶ್ವೇತ ಭವನದಿಂದ ಬಿಡುಗಡೆಯಾದ ದಾಖಲೆಯಲ್ಲಿ ಯುರೇನಿಯಂ ಬಗ್ಗೆ ಯಾವುದೇ ನಿಷೇಧವನ್ನು ಉಲ್ಲೇಖಿಸಿಲ್ಲ ಎಂದು ವರದಿಗಳು ತಿಳಿಸಿವೆ.