ರಷ್ಯಾದಿಂದ ಕಚ್ಚಾ ತೈಲ, ಗ್ಯಾಸ್ ಖರೀದಿ ನಿಲ್ಲಿಸಲು ಅಮೆರಿಕ ನಿರ್ಧಾರ: ವರದಿ

ಬುಧವಾರ, 9 ಮಾರ್ಚ್ 2022 (20:06 IST)
ಉಕ್ರೇನ್ ಮೇಲಿನ ಆಕ್ರಮಣಕ್ಕೆ ಪ್ರತಿಭಟನೆಯಾಗಿ ರಶ್ಯದಿಂದ ಕಚ್ಚಾ ತೈಲ ಹಾಗೂ ಗ್ಯಾಸ್ ಖರೀದಿಯನ್ನು ತಾನು ನಿಲ್ಲಿಸಿರುವುದಾಗಿ‌ ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಘೋಷಿಸಿದ್ದಾರೆಂದು ಪ್ರಮುಖ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಈ ನಡುವೆ ಜಾಗತಿಕ ತೈಲ ಉದ್ಯಮದ ದಿಗ್ಗಜ ಸಂಸ್ಥೆ ಶೆಲ್ ಲಿಮಿಟೆಡ್ ಕೂಡಾ ಕಚ್ಚಾತೈಲ ಖರೀದಿ ನಿಲ್ಲಿಸುವಿಕೆಯ ಘೋಷಣೆ ಹೊರಡಿಸಿದೆ. ಉಕ್ರೇನ್ನಲ್ಲಿ ರಶ್ಯ ಹೂಡಿಕೆ ಮಾಡಿರುವ ಎಲ್ಲಾ ತೈಲ, ನೈಸರ್ಗಿಕ ಅನಿಲ ಉದ್ಯಮಗಳಲ್ಲಿ ತನ್ನ ಒಳಗೊಳ್ಳುವಿಕೆಯನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುವುದಾಗಿಯೂ ಅದು ಘೋಷಿಸಿದೆ. ಯೂರೋಪ್‌ ನ ಹಲವು ದೇಶಗಳು ಇಂಧನ ಕೊರತೆ ಅನುಭವಿಸುತ್ತಿರುವುದರಿಂದ ಎಲ್ಲಾ ರಾಷ್ಟ್ರಗಳೂ ಈ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದೂ ಬೈಡನ್‌ ತಿಳಿಸಿದ್ದಾರೆ.
ರಶ್ಯದ ಕಚ್ಚಾತೈಲ ಹಾಗೂ ನೈಸರ್ಗಿಕ ಅನಿಲಗಳ ಖರೀದಿ ವಿರುದ್ಧ ಪಾಶ್ಚಾತ್ಯ ದೇಶಗಳು ನಿರ್ಬಂಧ ಹೇರಿದ ಬೆನ್ನಲ್ಲೇ ಸೋಮವಾರ ತೈಲ ಬೆಲೆಯು ಡಾಲರ್ಗೆ 139 ರೂ. ತಲುಪಿದ್ದು, 2008ರ ಬಳಿಕ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಇದು ಗರಿಷ್ಠ ಏರಿಕೆಯಾಗಿದೆ.
ರಶ್ಯದಿಂದ ತೈಲ ಆಮದನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಅಮೆರಿಕದ ಸಂಸದರು ಅಧ್ಯಕ್ಷ ಜೋ ಬೈಡನ್ ಅವರನ್ನು ಆಗ್ರಹಿಸಿದ್ದರು. ಬೈಡೆನ್ ಆಡಳಿತವು ಈವರೆಗೆ ರಶ್ಯದ ತೈಲ ಟ್ಯಾಂಕರ್ ಹಡಗುಗಳ ನಿರ್ಬಂಧ ಹೇರಿದ್ದು, ಇದೀಗ ತೈಲ ಮತ್ತು ಗ್ಯಾಸ್‌ ಮೇಲೆಯೂ ನಿರ್ಬಂಧ ಹೇರಿದೆ ಎಂದು ತಿಳಿದು ಬಂದಿದೆ. ಬ್ರಿಟನ್ ಹಾಗೂ ಕೆನಡಾ ಕೂಡಾ ರಶ್ಯದ ತೈಲ ನೌಕೆಗಳು ತಮ್ಮ ಬಂದರುಗಳಲ್ಲಿ ಲಂಗರುಹಾಕುವುದನ್ನು ನಿಷೇಧಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ