ಇನ್ಮುಂದೆ ಫ್ರಾನ್ಸ್‌ನಲ್ಲೂ ರೂಪಾಯಿಯಲ್ಲೇ ವ್ಯವಹಾರ ಮಾಡಬಹುದು

ಶನಿವಾರ, 15 ಜುಲೈ 2023 (09:56 IST)
ಪ್ಯಾರಿಸ್ : ಇನ್ನು ಮುಂದೆ ಫ್ರಾನ್ಸ್ನಲ್ಲಿರುವ ಅನಿವಾಸಿ ಭಾರತೀಯರು ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಬಳಸಿಕೊಂಡು ಭಾರತಲ್ಲಿರುವ ಸಂಬಂಧಿಕರಿಗೆ ಹಣವನ್ನು ಕಳುಹಿಸಬಹುದು ಜೊತೆಗೆ ಭಾರತದಿಂದ ತೆರಳಿದ ಪ್ರವಾಸಿಗರು ರೂಪಾಯಿಯಲ್ಲೇ ವ್ಯವಹಾರ ನಡೆಸಬಹುದು.

ಹೌದು. ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿರುವ ಪಾವತಿ ವ್ಯವಸ್ಥೆ ಯುಪಿಐ ಅನ್ನು ಫ್ರಾನ್ಸ್ನಲ್ಲೂ ಬಳಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ಯಾರಿಸ್ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಫ್ರಾನ್ಸ್ ಮತ್ತು ಭಾರತ ಫ್ರಾನ್ಸ್ನಲ್ಲಿ ಯುಪಿಐ ಬಳಸಲು ಒಪ್ಪಿಕೊಂಡಿವೆ. ಮುಂಬರುವ ದಿನಗಳಲ್ಲಿ ಇದು ಐಫೆಲ್ ಟವರ್ನಿಂದ ಪ್ರಾರಂಭವಾಗಲಿದೆ. ಭಾರತದ ಪ್ರವಾಸಿಗರು ಫ್ರಾನ್ಸಿನಲ್ಲಿ ರೂಪಾಯಿ ಮೂಲಕವೇ ವ್ಯವಹಾರ ನಡೆಸಬಹುದು ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ