ಅಂಟಾರ್ಟಿಕಾ ತಾಪಮಾನದಲ್ಲಿ ಜೀವಿಗಳು ಬದುಕಿರುವುದು ಹೇಗೆ ಗೊತ್ತಾ?ಬಯಲಾಗಿದೆ ಶಾಕಿಂಗ್ ವಿಚಾರ
ಮಂಗಳವಾರ, 14 ಮೇ 2019 (07:35 IST)
ಅಂಟಾರ್ಟಿಕ್ : ಅಂಟಾರ್ಟಿಕಾದ ಜೀವಿಗಳು ಅಲ್ಲಿನ ತೀವ್ರವಾದ ಬರ ಹಾಗೂ ತಂಪಾದ ಪರಿಸ್ಥಿತಿಯನ್ನು ಎದುರಿಸಿ ಹೇಗೆ ಬದುಕುತ್ತಿವೆ ಎಂಬ ರಹಸ್ಯ ಇದೀಗ ಬಯಲಾಗಿದೆ.
ಕರೆಂಟ್ ಬಯಾಲಜಿ ಎಂಬ ಜರ್ನಲ್‌ನಲ್ಲಿ ಇತ್ತೀಚೆಗೆ ಅಂಟಾರ್ಟಿಕ್ ಖಂಡದ ಜೀವಿಗಳು ಬದುಕಿರುವ ಬಗ್ಗೆ ಅಧ್ಯಯನಗಳನ್ನು ನಡೆಸಲಾಗಿದೆ. ಈ ಅಧ್ಯಯನದಲ್ಲಿ ಮಲದಿಂದ ಮಾಸಸ್ ಹಾಗೂ ಲಿಚನ್ಸ್ ಸೂಕ್ಷ್ಮ ಪ್ರಾಣಿಗಳು ಬದುಕಿವೆ ಎಂಬ ಅಚ್ಚರಿಯ ಸಂಗತಿ ಬಹಿರಂಗವಾಗಿದೆ.
ಸೀಲ್‌ಗಳು ಹಾಗೂ ಪೆಂಗ್ವಿನ್‌ಗಳು ಉತ್ಪಾದಿಸುವ ಮಲ ಭಾಗಶ: ಅಮೋನಿಯಾ ಆಗಿ ಆವಿಯಾಗುತ್ತದೆ. ಈ ಅಮೋನಿಯಾವನ್ನು ಬಳಿಕ ಗಾಳಿ ಎಳೆದುಕೊಳ್ಳುತ್ತದೆ. ನಂತರ, ಒಳನಾಡಿನಲ್ಲಿ ಗಾಳಿ ಬೀಸುತ್ತದೆ. ಇದು ಮಣ್ಣಿನ ಜತೆ ಮಿಶ್ರಣಗೊಂಡು ಸಾರಜನಕವನ್ನು ಒದಗಿಸುತ್ತದೆ. ಇದರಿಂದ ಇಂತಹ ತಾಪಮಾನಗಳಲ್ಲೂ ಸಹ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.