ಸಾಸಿವೆ ಎಣ್ಣೆ ತಲೆಗೆ ಹಚ್ಚಿದರೆ ಏನಾಗುತ್ತದೆ ಗೊತ್ತಾ?

ಶನಿವಾರ, 11 ಮೇ 2019 (07:29 IST)
ಬೆಂಗಳೂರು : ಸಾಸಿವೆ ಎಣ್ಣೆಯನ್ನು ಅಡುಗೆಗೆ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತು. ಆದರೆ ಇದನ್ನು ತಲೆಗೆ ಹಚ್ಚಬಹುದಾ ಎಂಬ ಗೊಂದಲ ಹಲವರಲ್ಲಿದೆ. ಆದರೆ ಸಾಸಿವೆ ಎಣ್ಣೆ ತಲೆಗೆ ಹಚ್ಚಿದರೆ ಕೂದಲಿಗೆ ತುಂಬಾ ಒಳ್ಳೇಯದಂತೆ. ಇದರಿಂದ ಹಲವು ಕೂದಲು ಸಮಸ್ಯೆಯನ್ನು ಪರಿಹರಿಸಬಹುದಂತೆ.




* ಸಾಸಿವೆ ಎಣ್ಣೆ ನೈಸರ್ಗಿಕವಾಗಿ ಕೂದಲನ್ನು ಕಪ್ಪಗೆ ಮಾಡುತ್ತದೆ. 20ರ ಹರೆಯದಲ್ಲೇ ಸಾಸಿವೆ ಎಣ್ಣೆಯನ್ನು ಕೂದಲಿಗೆ ಬಳಸಲು ಆರಂಭಿಸಿದರೆ ವಯಸ್ಸಾದರೂ ಕೂದಲು ಬಿಳಿಯಾಗುವುದನ್ನು ತಡೆಯಬಹುದಂತೆ.

* ತಲೆ ಬುರುಡೆಗೆ ಈ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ರಕ್ತಸಂಚಾರವು ಉತ್ತಮಗೊಂಡು ಕೂದಲಿನ ಬೆಳವಣಿಗೆ ಹಾಗೂ ಕೂದಲು ರೇಷ್ಮೆಯಂತೆ ಹೊಳೆಯಲು ನೆರವಾಗುವುದು. ಅಲ್ಲದೇ ತಲೆಹೊಟ್ಟು ಶೇಖರಣೆಯಾಗುವುದನ್ನು ಇದು ತಡೆಯುತ್ತದೆ.

* ಒಣ ಕೂದಲಿನ ಸಮಸ್ಯೆಯಿಂದ ಕೂದಲು  ಉದುರುತ್ತಿದ್ದರೆ ಈ ಎಣ್ಣೆ ಹಚ್ಚಿದರೆ ತೇವಾಂಶವನ್ನು ನೀಡುತ್ತದೆ.

* ಪ್ರತೀ ವಾರ ಸಾಸಿವೆ ಎಣ್ಣೆಯಿಂದ ತಲೆಬುರುಡೆಗೆ ಮಸಾಜ್ ಮಾಡಿದರೆ ಒಂದೇ ತಿಂಗಳಲ್ಲಿ ಕೂದಲು ಉದ್ದವಾಗಿ ಬೆಳವಣಿಗೆ ಆಗುತ್ತದೆಯಂತೆ.

* ಇದು ಕೂದಲನ್ನು ಬಲಿಷ್ಠವಾಗಿಸಿ ಕೂದಲು ತುಂಡಾಗದಂತೆ ಮಾಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ