ಅಮೆರಿಕಾ ಚುನಾವಣೆ ಪ್ರಚಾರಕ್ಕೆ ರಾಹುಲ್ ಗಾಂಧಿಯನ್ನು ಕರೆಸಿದರೇ ಕಮಲಾ ಹ್ಯಾರಿಸ್

Krishnaveni K

ಬುಧವಾರ, 11 ಸೆಪ್ಟಂಬರ್ 2024 (12:46 IST)
ವಾಷಿಂಗ್ಟನ್: ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ರಂಗೇರಿದ್ದು, ಈಗ ಭಾರತದ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಕಮಲಾ ಹ್ಯಾರಿಸ್ ಕರೆಸಿಕೊಂಡಿದ್ದಾರೆ. ಅಷ್ಟಕ್ಕೂ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಭಾರತದ ನಾಯಕನನ್ನು ಕರೆಸಿಕೊಂಡಿದ್ದು ಯಾಕೆ ಗೊತ್ತಾ?

ಸಾಮಾನ್ಯವಾಗಿ ಯಾವುದೇ ದೇಶದ ಚುನಾವಣೆ ಪ್ರಚಾರಕ್ಕೆ ವಿದೇಶೀ ನಾಯಕನನ್ನು ಕರೆಸಿ ಪ್ರಚಾರ ಮಾಡುವುದಿಲ್ಲ. ಆದರೆ ಅಮೆರಿಕಾದಲ್ಲಿ ಕಮಲಾ ಹ್ಯಾರಿಸ್ ಆಹ್ವಾನದ ಮೇರೆಗೆ ರಾಹುಲ್ ಗಾಂಧಿ ಹೋಗಿದ್ದಾರೆ ಎಂಬ ಮಾತಿದೆ. ಅಸಲಿಗೆ ರಾಹುಲ್ ಗಾಂಧಿ ಭಾರತೀಯ ವಿದ್ಯಾರ್ಥಿಗಳನ್ನುದ್ದೇಶಿಸಿ ಸಂವಾದ ನಡೆಸುತ್ತಿದ್ದಾರೆ.

ಭಾರತದ ಸ್ಥಿತಿಗತಿ ಬಗ್ಗೆ ಅಲ್ಲಿ ಭಾಷಣ ಮಾಡುತ್ತಿದ್ದಾರೆ. ಆದರೆ ಅಷ್ಟಕ್ಕೂ ರಾಹುಲ್ ಗಾಂಧಿ ಅಲ್ಲಿ ಭಾಷಣ ಮಾಡುವುದರ ಹಿಂದೆ ಕಮಲಾ ಹ್ಯಾರಿಸ್ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ. ಅಮೆರಿಕಾದಲ್ಲಿ ಸಾಕಷ್ಟು ಜನ ಭಾರತೀಯರಿದ್ದಾರೆ. ಅವರಲ್ಲಿ ಕೆಲವರಿಗೆ ಅಲ್ಲಿ ಮತದಾನದ ಹಕ್ಕೂ ಇದೆ.

ಹೀಗಾಗಿ ಭಾರತೀಯ ಮತದಾರರನ್ನು ಸೆಳೆಯುವ ಉದ್ದೇಶದಿಂದಲೇ ರಾಹುಲ್ ಗಾಂಧಿಯನ್ನು ಕರೆಸಿ ಅಲ್ಲಿ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂಬ ಮಾತಿದೆ. ಅದೇನೇ ಇರಲಿ, ಸದ್ಯಕ್ಕೆ ರಾಹುಲ್ ಗಾಂಧಿ ಮಾತ್ರ ವಿಪಕ್ಷ ನಾಯಕನಾದ ಬಳಿಕ ಮೊದಲ ಬಾರಿಗೆ ಅಮೆರಿಕಾ ಪ್ರವಾಸ ಮಾಡಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ