ಟೆಕ್ಸಾಸ್ ವಿವಿಯಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಂವಾದದಲ್ಲಿ ಅವರು ಚೀನಾವನ್ನು ಹೊಗಳಿ, ಭಾರತದ ಸಮಸ್ಯೆಯನ್ನು ಆಡಿಕೊಂಡಿದ್ದು ಎಲ್ಲರ ಟೀಕೆಗೆ ಗುರಿಯಾಗಿದೆ.
ಭಾರತದಲ್ಲಿ ಈಗಲೂ ಪುರುಷರಿಗೆ ತಾವೇ ಮೇಲು ಎಂಬ ಭಾವನೆಯಿದೆ. ಅವರಲ್ಲಿ ಮಹಿಳೆಯರೂ ಸಮಾನರು ಎಂಬ ಮನಸ್ಥಿತಿ ಮೂಡಬೇಕಿದೆ. ಮಹಿಳೆಯರ ಕುರಿತಾದ ಭಾವನೆ, ನಡವಳಿಕೆ ಕೂಡಾಆ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ಸೈದ್ಧಾಂತಿಕ ಹೋರಾಟವಾಗಿದೆ. ಬಿಜೆಪಿ ಮತ್ತು ಆರ್ ಎಸ್ಎಸ್ ಮಹಿಳೆಯರು ಮನೆಗೆ ಮಾತ್ರ ಸೀಮಿತವಾಗಬೇಕು, ಅಡುಗೆ ಮಾಡುತ್ತಾ ಕಾಲ ಕಳೆಯಬೇಕು, ಹೆಚ್ಚು ಮಾತನಾಡಬಾರದು ಎಂದು ಭಾವಿಸಿದ್ದಾರೆ. ಆರ್ ಎಸ್ ಎಸ್ ಭಾರತವನ್ನು ಒಂದು ಪರಿಕಲ್ಪನೆ ಎಂದು ನಂಬುತ್ತದೆ. ಆದರೆ ಕಾಂಗ್ರೆಸ್ ಭಾರತವನ್ನು ಹಲವು ವೈವಿದ್ಯಮಯ ಪರಿಕಲ್ಪನೆ ಎಂದು ಭಾವಿಸುತ್ತದೆ ಎಂದಿದ್ದಾರೆ.