ಟ್ವಿಟ್ಟರ್ ಬ್ಲೂಟಿಕ್ ಪಡೆದ ಭಾರತದ ಮೊದಲ ಮಹಿಳೆ

ಮಂಗಳವಾರ, 8 ನವೆಂಬರ್ 2022 (14:14 IST)
ನವದೆಹಲಿ : ಟೆಸ್ಲಾ ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ಟ್ವಿಟ್ವರ್ ಸ್ವಾಧೀನಪಡಿಸಿಕೊಂಡ ನಂತರ ಮೈಕ್ರೋ ಬ್ಲಾಗಿಂಗ್ ಸೈಟ್ಗಳ ಬದಲಾವಣೆ ನಡೆಯುತ್ತಿರುವುದು ಹೆಚ್ಚು ಚರ್ಚೆಯಲ್ಲಿದೆ.

ಮಸ್ಕ್ ಟ್ವಿಟ್ಟರ್ನಲ್ಲಿ ಬ್ಲೂಟಿಕ್ ಇರುವ ಪರಿಶೀಲಿಸಿದ ಖಾತೆ ಪಡೆಯಲು ತಿಂಗಳಿಗೆ 8 ಡಾಲರ್ (655 ರೂ.) ಶುಲ್ಕ ಪಾವಿಸುವ ನಿಯಮ ಜಾರಿಗೆ ತಂದಿದ್ದಾರೆ. ಈ ನಿಯಮ ಜಾರಿಗೆ ಬಂದ ನಂತರ ನೈನಾ ರೆಧು ಎಂಬ ಮಹಿಳೆ ಹಣ ಪಾವತಿಸಿ ಪರಿಶೀಲಿಸಿದ ಖಾತೆ ಪಡೆದ ಮೊದಲ ಭಾರತೀಯರಾಗಿದ್ದಾರೆ.

2006ರಲ್ಲಿ ಟ್ವಿಟ್ಟರ್ ಬಳಗ ಸೇರಿದ ನೈನಾ ಭಾರತೀಯ ಟ್ವಿಟ್ಟರ್ ಬಳಕೆದಾರರಲ್ಲಿ ಒಬ್ಬರಾಗಿದ್ದರು. ಮುಂಬೈ ಜೈಸಲ್ಮೇರ್ನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುವ ನೈನಾ ಈವರೆಗೆ ಸುಮಾರು 1.75 ಲಕ್ಷ ಟ್ವೀಟ್ ಮಾಡಿದ್ದಾರೆ. 

ಹಣ ಪಾವತಿಸಿ ಬ್ಲೂಟಿಕ್ ಪಡೆದ ಬಳಿಕ ಮಾತನಾಡಿದರುವ ನೈನಾ, ಟ್ವಿಟ್ಟರ್ನಿಂದ ನನಗೆ ಇ-ಮೇಲ್ ಮೂಲಕ ಆಹ್ವಾನ ಬಂದಿತ್ತು. ಇದೀಗ ಇನ್ನಷ್ಟು ಅನ್ವೇಷಿಸಬಹುದು ಎಂದು ಸೇರಿಕೊಂಡೆ. ಭವಿಷ್ಯದಲ್ಲಿ ಟ್ವಿಟ್ಟರ್ ದೊಡ್ಡ ವೇದಿಕೆಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ